ಮಹಾರಾಷ್ಟ್ರ: ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯಯೋಜಿತ ಎಂಬ ಜನಪ್ರಿಯ ಗಾದೆ ಮಾತನ್ನು ನೀವು ಕೇಳಿರಬಹುದು. ಆದರೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಇಬ್ಬರು ಯುವಕರು ತಮ್ಮ ಪ್ರೀತಿಯನ್ನು ಸಾಬೀತುಪಡಿಸಲು ಹೋದ (iPhoneCraze) ಹಾದಿ ಮಾತ್ರ ಈಗ ಅವರನ್ನು ಕಂಬಿ ಎಣಿಸುವಂತೆ ಮಾಡಿದೆ.
ಘಟನೆ ಏನು?
ಇತ್ತೀಚೆಗೆ ಐಷಾರಾಮಿ ಅಪಾರ್ಟ್ಮೆಂಟ್ವೊಂದರಲ್ಲಿ ಬೆಲೆಬಾಳುವಂತಹ ವಸ್ತುಗಳು ಕಳ್ಳತನವಾಗುತ್ತಿದ್ದವು. ಇದರಿಂದ ಬೇಸತ್ತ ಮಾಲೀಕರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾದ 20-35 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವಿಶೇಷ ತನಿಖಾಧಿಕಾರಿಗಳ ತಂಡ ಪರಿಶೀಲನೆ ನಡೆಸಿದ ನಂತರ ಈ ಇಬ್ಬರ ಯುವಕರ ಪ್ರೇಮ ಪುರಾಣ ಬಯಲಾಗಿದೆ.
ಆದಾಗ್ಯೂ, ಅವರಿಬ್ಬರಿಗೂ ತಲಾ ಒಬ್ಬರಂತೆ ಇಬ್ಬರು ಪ್ರೇಯಸಿಗಳಿದ್ದರು. ಅವರಿಗೆ ಐಷಾರಾಮಿ ಐಫೋನ್ (iPhone) ಮೊಬೈಲ್‌ಗಳನ್ನು ಉಡುಗೊರೆಯಾಗಿ ನೀಡಲು ಯೋಜಿಸಿದ್ದ ಆರೋಪಿಗಳು 6.5 ಲಕ್ಷ ಬೆಲೆ ಬಾಳುವ ಡಿಸೈನರ್ ನಲ್ಲಿಗಳನ್ನು ಕಳ್ಳತನ ಮಾಡಿ ಗುಜರಿ ಅಂಗಡಿಗೆ 20 ಸಾವಿರಕ್ಕೆ ಮಾರಾಟ ಮಾಡಿರುವುದಾಗಿ ತಿಳಿದುಬಂದಿದೆ.
ಕದ್ದ ವಸ್ತುಗಳು ಈ ಕೆಳಗಿನಂತಿವೆ
* ಚಿನ್ನದ ಬಣ್ಣದ ವಿಶೇಷ ವಿನ್ಯಾಸದ ನಲ್ಲಿಗಳು 5 (ಮೌಲ್ಯ: ರೂ 3,94,500)
* ಪ್ರಮಾಣಿತ ಚಿನ್ನದ ಬಣ್ಣದ ನಲ್ಲಿಗಳು 3 (ಮೌಲ್ಯ: ರೂ. 67,000)
* ರೋಸ್ ಗೋಲ್ಡ್ ಬಣ್ಣದ ನಲ್ಲಿಗಳು 9 (ಮೌಲ್ಯ: ರೂ 1,30,500)
* ಬೆಳ್ಳಿ ಬಣ್ಣದ ಕಲಾತ್ಮಕ ನಲ್ಲಿಗಳು 4 (ಮೌಲ್ಯ: ರೂ. 58,000)
ಮೂಲಗಳ ಪ್ರಕಾರ, ಮೇ 27 ಮತ್ತು ಮೇ 28 ರ ಮಧ್ಯರಾತ್ರಿ, ಅಪರಿಚಿತ ಕಳ್ಳರು ಛಾವಣಿಯಿಂದ ಟಿನ್ ಶೀಟ್‌ಗಳನ್ನು ತೆಗೆದು ಗೋದಾಮಿನೊಳಗೆ ಪ್ರವೇಶಿಸಿದರು. ಅವರು 6.5 ಲಕ್ಷ ರೂ. ಮೌಲ್ಯದ ಐಷಾರಾಮಿ ನೈರ್ಮಲ್ಯ ಉತ್ಪನ್ನಗಳನ್ನು ಕದ್ದಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಯುವಕರು ಮತ್ತು ಪ್ರಮುಖ ಆರೋಪಿಯನ್ನು ಬಂಧಿಸಿದರು. ತೀವ್ರ ವಿಚಾರಣೆಯ ನಂತರ ಅವರು ತಮ್ಮ ಗೆಳತಿಯರಿಗಾಗಿ ಐಫೋನ್ ಖರೀದಿಸಲು ದರೋಡೆ ಮಾಡಿ, ಅವುಗಳನ್ನು 20,000 ರೂ.ಗೆ ಮಾರಾಟ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ (ಏಜೆನ್ಸೀಸ್).