ಕುಲ್ಫಿ ಆಸ್ವಾದಿಸುವ ಮುನ್ನ ಎಚ್ಚರ; ಮುಂಬೈನಲ್ಲಿ ತಾಳೆ ಎಣ್ಣೆ, ಗಂಜಿ ಬಳಸಿ ತಯಾರಿಸುತ್ತಿದ್ದ 'ರಬ್ಡಿ ಕುಲ್ಫಿ' ವಶಕ್ಕೆ..Mumbai
Adulterated Kulfi Mumbai Raid
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮುಂಬೈನ ಕಾಂದಿವಲಿಯ 'ಕೆಸಿ ಇಂಜಿನಿಯರಿಂಗ್ ಕಾರ್ಪೊರೇಷನ್' ಮೇಲೆ ಆಹಾರ ಪ್ರಾಧಿಕಾರದ ದಾಳಿ.
ತಾಳೆ ಎಣ್ಣೆ ಮತ್ತು ಗಂಜಿ ಬಳಸಿ ತಯಾರಿಸಿದ ನಕಲಿ 'ರಬಡಿ ಕುಲ್ಫಿ' ಹಾಗೂ ಲೇಬಲ್ ಇಲ್ಲದ ಕ್ರೀಮ್ ವಶ.
ಮಾರ್ಚ್‌ನಲ್ಲಿ ಹೈದರಾಬಾದ್‌ನಲ್ಲೂ ಕುಲ್ಫಿ, ಬಾದಾಮ್ ಮಿಲ್ಕ್ ಘಟಕದ ಮೇಲೆ ದಾಳಿ
ಮುಂಬೈ: ಹಾಲು, ಏಲಕ್ಕಿ, ಸಕ್ಕರೆ, ಕೇಸರಿ, ಬಾದಾಮ್ ಹಾಗೂ ಪಿಸ್ತಾ ಬಳಸಿ ತಯಾರಿಸುವ ಕುಲ್ಫಿ ಯಾರಿಗೆ ತಾನೇ ಇಷ್ಟವಿಲ್ಲ. ಬೇಸಿಗೆಯಲ್ಲಂತೂ ಮಕ್ಕಳಿನಿಂದ ಹಿರಿಯರವರೆಗೂ ಇಷ್ಟಪಟ್ಟು ಖರೀದಿ ಮಾಡುವ ಒಂದು ಉತ್ಪನ್ನ. ಆದರೆ, ಈಗ ಗಂಭೀರವಾಗಿ ಯೋಚಿಸಿ ಕುಲ್ಫಿ ತಿನ್ನಬೇಕಾದ ಪರಿಸ್ಥಿತಿ ಎದುರಾಗಿದೆ.
ಹೌದು, ಮುಂಬೈ ಕಾಂದಿವಾಲಿ ಪ್ರದೇಶದಲ್ಲಿ ನಕಲಿ ಕುಲ್ಫಿ ತಯಾರಿಸುತ್ತಿದ್ದ ಕೇಂದ್ರದ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿ (Kulfi Mumbai Raid)ನಡೆಸಿ, ದಾಸ್ತಾನನ್ನು ವಶಕ್ಕೆ ಪಡೆದುಕೊಂಡಿದೆ.
ನಕಲಿ ಕುಲ್ಫಿಗೆ ಏನೆಲ್ಲ ಬಳಕೆ?
ಚಾರ್ಕೋಪ್ ಮೂಲದ 'ಕೆಸಿ ಇಂಜಿನಿಯರಿಂಗ್ ಕಾರ್ಪೊರೇಷನ್' ಸಂಸ್ಥೆಯ ಕಾರ್ಖಾನೆಯಲ್ಲಿ ತಾಳೆ ಎಣ್ಣೆ, ಅನ್ನದ ಗಂಜಿ ಬಳಸಿ ತಯಾರಿಸಲಾಗುತ್ತಿದ್ದ ಫ್ರೋಜನ್ ಡೆಸರ್ಟ್ ಅನ್ನು ಇಲ್ಲಿನ ಫೇಮಸ್ 'ರಬಡಿ ಕುಲ್ಫಿ' ಎಂದು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಸ್ಪಷ್ಟ ಉಲ್ಲಂಘನೆಯಾಗಿದೆ.
'ರಬಡಿ ಕುಲ್ಫಿ' ಎಂದು ಮಾರಾಟ ಮಾಡಲಾಗುತ್ತಿದ್ದ ನಕಲಿ ಪದಾರ್ಥದ ಮೇಲೆ ತಪ್ಪು ಮಾಹಿತಿಯನ್ನು ಮುದ್ರಿಸಲಾಗಿತ್ತು. ಹೀಗಾಗಿ ರಬಡಿ ಕುಲ್ಫಿ ಹಾಗೂ ಯಾವುದೇ ಲೇಬಲ್ ಇಲ್ಲ ಕ್ರೀಮ್ ದಾಸ್ತಾನು ವಶಪಡಿಸಿಕೊಳ್ಳಲಾಗಿದೆ. ಆಹಾರ ಉತ್ಪನ್ನದ ಮಾದರಿ ಪರೀಕ್ಷೆಗೆ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ
ಹೈದರಾಬಾದ್‌ನಲ್ಲೂ ನಡೆದಿತ್ತು ದಾಳಿ!
ಕಳೆದ ಮಾರ್ಚ್ ತಿಂಗಳಿನಲ್ಲಿ ತೆಲಂಗಾಣದ ಹೈದರಾಬಾದ್‌ನ ಮಲ್ಲಾಪುರ ಪ್ರದೇಶದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಇಂತಹುದೇ ಶಾಕಿಂಗ್ ಜಾಲವನ್ನು ಪತ್ತೆ ಹಚ್ಚಿದ್ದರು. ಅಲ್ಲಿನ ಕುಲ್ಫಿ, ಫಲೂಡಾ ಮತ್ತು ಬಾದಾಮ್ ಮಿಲ್ಕ್ ತಯಾರಿಕಾ ಘಟಕದ ಮೇಲೆ ನಡೆಸಿದ ದಿಢೀರ್ ದಾಳಿಯ ಸಂದರ್ಭದಲ್ಲಿ ತೀವ್ರ ಅಸ್ವಸ್ಥತೆ ಮತ್ತು ಅಶುಚಿತ್ವದ ವಾತಾವರಣ ಕಂಡುಬಂದಿತ್ತು. ಅತ್ಯಂತ ಕೊಳಕು ವಾತಾವರಣದಲ್ಲಿ ಬಾದಾಮ್ ಮಿಲ್ಕ್ ತಯಾರಿಸಲಾಗುತ್ತಿತ್ತು ಹಾಗೂ ಆಹಾರ ಪದಾರ್ಥಗಳ ಮೇಲೆ ನೊಣಗಳು ಮುತ್ತುತ್ತಿದ್ದವು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಸುಮಾರು 50 ಲೀಟರ್‌ನಷ್ಟು ಸಿದ್ಧಪಡಿಸಲಾಗಿದ್ದ ಕಲುಷಿತ ಉತ್ಪನ್ನಗಳನ್ನು ಸ್ಥಳದಲ್ಲೇ ನಾಶಪಡಿಸಿ, ಅವು ಮಾರುಕಟ್ಟೆ ಸೇರುವುದನ್ನು ತಡೆದಿದ್ದರು, ( ಏಜೆನ್ಸೀಸ್).