ಕ್ಷುಲ್ಲಕ ಕಾರಣಕ್ಕೆ ಕೊಲೆ: ಮದ್ಯಕ್ಕೆ ನೀರು ಬೆರೆಸಲು ನಿರಾಕರಣೆ; ಬಾಲಕನನ್ನು ಗುಂಡಿಕ್ಕಿ ಕೊಂದ ಪಾಪಿಗಳು..Boy killed

 ಎಣ್ಣೆಗೆ ನೀರು ಬೆರೆಸಲು ನಿರಾಕರಿಸಿದ್ದಕ್ಕೆ ಬಾಲಕನ ಹತ್ಯೆ!
ಎಣ್ಣೆಗೆ ನೀರು ಬೆರೆಸಲು ನಿರಾಕರಿಸಿದ್ದಕ್ಕೆ ಬಾಲಕನ ಹತ್ಯೆ!
Published on
ಉತ್ತರ ಪ್ರದೇಶ: ಎಣ್ಣೆ (ಮದ್ಯ) ಗೆ ಬೆರೆಸಲು ನೀರನ್ನು ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ಒಂಭತ್ತು ವರ್ಷದ ಬಾಲಕನನ್ನು ಗುಂಡಿಕ್ಕಿ ಕೊಂದಿರುವ (Boy killed) ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ವರದಿಯಾಗಿದೆ.
ಈ ಘಟನೆಯು ಶುಕ್ರವಾರ (ಮೇ.1) ಯಕ್ತಗಂಜ್​ ಗ್ರಾಮದಲ್ಲಿ ನಡೆದಿದ್ದು, ಆ ದಿನ ಮನೆಯಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಮೃತ ಬಾಲಕ ಚಿಕ್ಕಪ್ಪ ಅನುಜ್​ ಪ್ರಕಾರ, ಮನೆಯಲ್ಲಿ ಶುಭಕಾರ್ಯವಿದ್ದ ಹಿನ್ನಲೆಯಲ್ಲಿ ಗ್ರಾಮದವರು ಹಾಗೂ ಕುಟುಂಬದ ಸರ್ವರೂ ಜಮಾಯಿಸಿದ್ದರು. ಮೃತ ಬಾಲಕನ ತಂದೆಯ ಸಂಬಂಧಿಗಳಾದ, ಧನೇಶ್​ ಯಾದವ್​ ಹಾಗೂ ಸುಖ್ವೀರ್​ ಯಾದವ್​, ಮದ್ಯ ಸೇವಿಸುತ್ತಿದ್ದು, ಬಾಲಕನಿಗೆ ನೀರನ್ನು ತೆಗೆದುಕೊಂಡು ಬರಲು ಹೇಳಿದ್ದಾರೆ.
ಆದರೆ ಹುಡುಗ ನೀರನ್ನು ತರಲು ಒಪ್ಪದಿದ್ದಾಗ, ಕುಪಿತರಾದ ಇವರು ಹುಡುಗನ ಹೊಟ್ಟೆಗೆ ಗುಂಡನ್ನು ಹಾರಿಸಿದ್ದಾರೆ. ತಕ್ಷಣ ಬಾಲಕನನ್ನು ನಾವು ಜಿಲ್ಲಾಸ್ಪತ್ರೆಗೆ ನಂತರ, ಅಲಿಗಢದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅದರೆ ಅಧಿಕ ರಕ್ತಸ್ರಾವವಾದ ಹಿನ್ನಲೆ, ಬಾಲಕ ಪ್ರಾಣವನ್ನು ಕಳೆದು ಕೊಂಡಿರುವುದಾಗಿ ಅನುಜ್​ ತಿಳಿಸಿದ್ದಾರೆ.

ಪೊಲೀಸರಿಂದ ಪ್ರಕರಣ ದಾಖಲು

ಘಟನೆ ನಂತರ ಮೃತ ಬಾಲಕನ ಕುಟುಂಬದವರು ಪೊಲೀಸ್​ರಲ್ಲಿ ದೂರನ್ನು ದಾಖಲಿಸಿದ್ದು, ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. ಆದರೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಪ್ರಯತ್ನವನ್ನು ನಾವು ಮಾಡುತ್ತೆವೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ​ರಾಜೇಶ್​ ಕುಮಾರ್​ ಭಾರತಿ ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net