ಪೆಸಿಫಿಕ್ ಮಹಾಸಾಗರದಲ್ಲಿ ಉಂಟಾಗುತ್ತಿರುವ 'ಎಲ್ ನಿನೋ' (El Nino) ಪರಿಸ್ಥಿತಿಯ ಪ್ರಭಾವದಿಂದಾಗಿ ಈ ಬಾರಿ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಹಿಂದೆ ಮುಂಗಾರು ಮಳೆಯು ದೀರ್ಘಾವಧಿಯ ಸರಾಸರಿಯ ಶೇ. 92 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು, ಆದರೆ ಕಳೆದ ವಾರ ಐಎಂಡಿ ಈ ಮುನ್ಸೂಚನೆಯನ್ನು ಶೇ. 90 ಕ್ಕೆ ಇಳಿಸಿದೆ. ಉತ್ತರ ಮತ್ತು ಮಧ್ಯ ಭಾರತದಲ್ಲಿ ತೀವ್ರ ಬಿಸಿಗಾಳಿ ಮುಂದುವರಿದಿದೆ, (ಏಜೆನ್ಸೀಸ್).