Jawad Ahmed Siddiqui| ಅಕ್ರಮ ಹಣ ವರ್ಗಾವಣೆ: ಅಲ್ ಫಲಾಹ್ ವಿಶ್ವವಿದ್ಯಾಲಯದ ಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿಯನ್ನು ಬಂಧಿಸಿದ ED

ಅಲ್-ಫಲಾಹ್ ವಿಶ್ವವಿದ್ಯಾಲಯ Al-Falah University
ಅಲ್-ಫಲಾಹ್ ವಿಶ್ವವಿದ್ಯಾಲಯ Al-Falah University
Published on
ನವದೆಹಲಿ: ಅಲ್-ಫಲಾಹ್ ವಿಶ್ವವಿದ್ಯಾಲಯದ ಸ್ಥಾಪಕ ಮತ್ತು ಅಲ್-ಫಲಾಹ್ ಗ್ರೂಪ್‌ನ ಅಧ್ಯಕ್ಷ ಜವಾದ್ ಅಹ್ಮದ್ ಸಿದ್ದಿಕಿ(Jawad Ahmed Siddiqui) ಅವರನ್ನು 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಸೆಕ್ಷನ್ 19ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಮಂಗಳವಾರ (ನ.18) ತಿಳಿಸಿದ್ದಾರೆ.
ಈ ಪ್ರಕರಣದ ಸಂಬಂಧ ಇಸಿಐಆರ್ ಆಧಾರಿತ ತನಿಖೆಯ ಭಾಗವಾಗಿ ಅಲ್-ಫಲಾಹ್ ಗ್ರೂಪ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆದ ಶೋಧದ ಸಮಯದಲ್ಲಿ ಸಂಗ್ರಹಿಸಿದ ಸಾಮಗ್ರಿಗಳ ವಿವರವಾದ ಪರಿಶೀಲನೆಯ ನಂತರ ಬಂಧಿಸಿಲಾಗಿದೆ. ಅಲ್ಲದೆ, ಮೂಲಗಳ ಪ್ರಕಾರ, ದೆಹಲಿ ಪೊಲೀಸ್ ಅಪರಾಧ ಶಾಖೆ ಸಲ್ಲಿಸಿದ ಎರಡು ಎಫ್‌ಐಆರ್‌ಗಳ ನಂತರ ಇಡಿ ತನಿಖೆ ಪ್ರಾರಂಭವಾಯಿತು. ಅಲ್-ಫಲಾಹ್ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳು ಮತ್ತು ಪಾಲುದಾರರನ್ನು ತಪ್ಪುದಾರಿಗೆಳೆಯಲು ನ್ಯಾಕ್ ಮಾನ್ಯತೆಯ ವಂಚನೆಯ ಹಕ್ಕುಗಳನ್ನು ನೀಡಿದೆ ಎಂದು ಆರೋಪಿಸಲಾಗಿದೆ.
ಯುಜಿಸಿ ಕಾಯ್ದೆಯ ಸೆಕ್ಷನ್ 12(ಬಿ) ಅಡಿಯಲ್ಲಿ ಮಾನ್ಯತೆ ಪಡೆದಿರುವುದಾಗಿ ವಿಶ್ವವಿದ್ಯಾನಿಲಯವು ಸುಳ್ಳು ಹೇಳಿಕೆ ನೀಡಿದೆ ಎಂದು ಎಫ್‌ಐಆರ್‌ಗಳು ಆರೋಪಿಸಿವೆ. ಆದರೆ ಸೆಕ್ಷನ್ 2(ಎಫ್) ಅಡಿಯಲ್ಲಿ ಮಾತ್ರ ರಾಜ್ಯ ಖಾಸಗಿ ವಿಶ್ವವಿದ್ಯಾಲಯ ಎಂದು ಸೇರಿಸಲಾಗಿದೆ. ಅಲ್ಲದೆ, ಅಲ್-ಫಲಾಹ್ ವಿಶ್ವವಿದ್ಯಾಲಯವು ಎಂದಿಗೂ 12(ಬಿ) ಸ್ಥಾನಮಾನಕ್ಕೆ ಅರ್ಜಿ ಸಲ್ಲಿಸಿಲ್ಲ ಮತ್ತು ಆ ನಿಬಂಧನೆಯ ಅಡಿಯಲ್ಲಿ ಅನುದಾನಕ್ಕೆ ಅರ್ಹವಾಗಿಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದೆ.

ಟ್ರಸ್ಟ್ ರಚನೆ ಮತ್ತು ಅಕ್ರಮ ಹಣ ವರ್ಗವಣೆ

1995 ರಲ್ಲಿ ಸ್ಥಾಪನೆಯಾದ ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್, ಸಿದ್ದಿಕಿ ಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿಯಾಗಿದ್ದು, ಅಲ್-ಫಲಾಹ್ ಗ್ರೂಪ್ ಅಡಿಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ ಮತ್ತು ಆರ್ಥಿಕವಾಗಿ ಕ್ರೋಢೀಕರಿಸುತ್ತದೆ ಎಂದು ಮೂಲಗಳು ತಿಳಿಸಿವೆ. 1990 ರ ದಶಕದಿಂದ ಟ್ರಸ್ಟ್ ಮತ್ತು ಅದರ ಸಂಸ್ಥೆಗಳು ವೇಗವಾಗಿ ಬೆಳೆದಿವೆ. ಆದರೆ ಈ ಏರಿಕೆಗೆ ಯಾವುದೇ ಹಣಕಾಸಿನ ಬೆಂಬಲವಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯ ಮತ್ತು ಪ್ರಮುಖ ಸಿಬ್ಬಂದಿಯ ವಸತಿ ಆವರಣದಲ್ಲಿ ನಡೆಸಿದ ದಾಳಿಯಲ್ಲಿ ಕೋಟ್ಯಂತರ ರೂಪಾಯಿಗಳನ್ನು ಅಪರಾಧದಿಂದ ಗಳಿಸಲಾಗಿದೆ ಮತ್ತು ಬೇರೆಡೆಗೆ ತಿರುಗಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಟ್ರಸ್ಟ್‌ನಿಂದ ಬಂದ ಹಣವನ್ನು ಕುಟುಂಬ ಸ್ವಾಮ್ಯದ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂಬುದಕ್ಕೆ ತನಿಖಾಧಿಕಾರಿಗಳು ಪುರಾವೆಗಳನ್ನು ಕಂಡುಹಿಡಿದಿದ್ದಾರೆ. ಈ ಹಣವನ್ನು ಸಿದ್ದಿಕಿ ಅವರ ಪತ್ನಿ ಮತ್ತು ಮಕ್ಕಳೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

48 ಲಕ್ಷ ರೂಪಾಯಿ ನಗದು ದಂಧೆ, ಶೆಲ್ ಕಂಪನಿಗಳು ಪತ್ತೆ

ಜಾರಿ ನಿರ್ದೇಶನಾಲಯವು 48 ಲಕ್ಷ ರೂ. ನಗದು, ಡಿಜಿಟಲ್ ಸಾಧನಗಳು ಮತ್ತು ವ್ಯಾಪಕ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈ ಗುಂಪಿಗೆ ಸಂಬಂಧಿಸಿದ ಹಲವಾರು ಶೆಲ್ ಕಂಪನಿಗಳನ್ನು ಮತ್ತು ಹಲವಾರು ಇತರ ಕಾನೂನುಗಳ ಅಡಿಯಲ್ಲಿ ಉಲ್ಲಂಘನೆಗಳನ್ನು ಸಹ ಸಂಸ್ಥೆ ಗುರುತಿಸಿದೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ತನಿಖೆಯ ಸಮಯದಲ್ಲಿ ವಶಪಡಿಸಿಕೊಂಡ ಪುರಾವೆಗಳು ನಿಧಿಯ ತಿರುವು, ಒಂದರ ಮೇಲೊಂದು ಜೋಡಣೆ ಮತ್ತು ಟ್ರಸ್ಟ್ ನಿಧಿಗಳ ದುರುಪಯೋಗದ ಸ್ಪಷ್ಟ ಮಾದರಿಯನ್ನು ತೋರಿಸುತ್ತವೆ. ಇವೆಲ್ಲವೂ ಸಂಸ್ಥೆಯ ಹಣಕಾಸು ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಸಿದ್ದಿಕಿಯವರ ನಿಯಂತ್ರಣದಲ್ಲಿದೆ.
ಹಣಕಾಸಿನ ತನಿಖೆಯ ಜೊತೆಗೆ, ಅಕ್ರಮವಾಗಿ ವರ್ಗಾವಣೆಗೊಂಡ ಹಣದ ಯಾವುದೇ ಭಾಗವನ್ನು ನವೆಂಬರ್ 10 ರಂದು 14 ಜನರ ಸಾವಿಗೆ ಕಾರಣವಾದ ಕೆಂಪು ಕೋಟೆ ಸ್ಫೋಟಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ವರ್ಗಾಯಿಸಲಾಗಿದೆಯೇ ಎಂಬುದನ್ನು ಇಡಿ ಪರಿಶೀಲಿಸುತ್ತಿದೆ. ಈ ವಿಚಾರಣೆ ಇನ್ನೂ ನಡೆಯುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net