ತಿರುವನಂತಪುರಂ: ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವ ಮಾಲಿವುಡ್ ನಟ ಮೋಹನ್ ಲಾಲ್ ಅವರು, ತಮ್ಮ ಬಳಿ ಹತ್ತು ಆನೆ ದಂತ ಹಾಗೂ 13 ದಂತದಿಂದ ತಯಾರಿಸಿದ ವಿಗ್ರಹವಿದೆ ಎಂದು ಕೇರಳ ಅರಣ್ಯ ಇಲಾಖೆಗೆ ರಾಜ್ಯದ ವನ್ಯಜೀವಿ ಕ್ಷಮಾದಾನ ಯೋಜನೆಯಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.