ನೆಹರೂ ದೇಶಕ್ಕೆ ನೀಡಿದ ಕೊಡುಗೆಗಳನ್ನು ಮೋದಿ ತಿರುಚಿದ್ದಾರೆ: ಕಾಂಗ್ರೆಸ್ ಆರೋಪ | Congress

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಮಂತ್ರಿ ಜವಾಹರಲಾಲ್ ನೆಹರು(Congress)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಮಂತ್ರಿ ಜವಾಹರಲಾಲ್ ನೆಹರು(Congress)
Published on
ನವದೆಹಲಿ: ಭಾರತದ ಮೊದಲ ಪ್ರಧಾನಿ ಮಂತ್ರಿ ಜವಾಹರಲಾಲ್ ನೆಹರು ಆಧುನಿಕ ಭಾರತದ ನಿರ್ಮಾಣಕ್ಕೆ ನೀಡಿದ ಅಪಾರ ಕೊಡುಗೆಗಳನ್ನು ಪ್ರಧಾನಿ ನರೇಂದ್ರ ಮೋದಿಯು ವಿರೂಪಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ (Congress) ಶುಕ್ರವಾರ (ನ.14) ಆರೋಪಿಸಿದೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನೆಹರೂ ಅವರ ಕೊಡುಗೆಗಳನ್ನು ಶ್ಲಾಘಿಸಿದ್ದಾರೆ. ಅವರ ಪರಂಪರೆ ಕಾಲಾತೀತವಾಗಿ ದಾರಿದೀಪವಾಗಿ ಉಳಿದಿದೆ. ಭಾರತದ ಕಲ್ಪನೆ ಮತ್ತು ಅವರು ಪಾಲಿಸಿದ ಮೌಲ್ಯಗಳಾದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳಗಿಸುತ್ತದೆ ಎಂದು ಹೇಳಿದ್ದಾರೆ.
ದೇಶದ ಮೇಲೆ ನೆಹರು ದೃಷ್ಟಿಕೋನವು ನಮ್ಮ ಆತ್ಮಸಾಕ್ಷಿಗೆ ಸ್ಫೂರ್ತಿ ನೀಡುತ್ತಲೇ ಇದೆ. ನಮ್ಮ ಸಾಮೂಹಿಕ ಕ್ರಿಯೆಗಳನ್ನು ರೂಪಿಸುತ್ತಿದೆ. ಭಾರತದ ಮೊದಲ ಪ್ರಧಾನಿಯು ಸತ್ಯ, ಏಕತೆ ಮತ್ತು ಶಾಂತಿಯನ್ನು ಆಳವಾಗಿ ಪಾಲಿಸಿದ ನಾಯಕನಿಗೆ ಗೌರವ ಸಲ್ಲಿಸುತ್ತಿದ್ದೇನೆ. ನಮ್ಮ ರಾಷ್ಟ್ರದ ಭವಿಷ್ಯಕ್ಕೆ ಮಕ್ಕಳ ದಿನದಂದು ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ನೆಹರು ಹುಟ್ಟುಹಬ್ಬಕ್ಕೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ರಾಹುಲ್​ ಗಾಂಧಿ, ನೆಹರು ತಮ್ಮ ದೂರದೃಷ್ಟಿಯ ಮತ್ತು ನಿರ್ಭೀತ ನಾಯಕತ್ವದ ಮೂಲಕ ಸ್ವತಂತ್ರ ಭಾರತದಲ್ಲಿ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅಡಿಪಾಯ ಹಾಕಿದರು. ದೇಶಕ್ಕೆ ಹೊಸ ದಿಕ್ಕನ್ನು ಒದಗಿಸಿದರು ಎಂದು ತಿಳಿಸಿದ್ದಾರೆ.
ನೆಹರು ಅವರ ಆದರ್ಶಗಳು ಮತ್ತು ಮೌಲ್ಯಗಳು ಇಂದಿಗೂ ನಮಗೆ ಸ್ಫೂರ್ತಿಯ ಮೂಲವಾಗಿವೆ. ಅವರ ಜನ್ಮ ವಾರ್ಷಿಕೋತ್ಸವದಂದು ಹಿಂದ್ ಕೆ ಜವಾಹರ್ ಅವರಿಗೆ ಗೌರವಯುತ ನಮನಗಳು ಎಂದು ರಾಹುಲ್​ ಬರೆದುಕೊಂಡಿದ್ದಾರೆ.
ಮಾಜಿ ಪ್ರಧಾನಿ ನೆಹರು ಅವರ 136 ನೇ ಜನ್ಮ ದಿನಾಚರಣೆಯಂದು ಪ್ರಧಾನಿ ಮೋದಿ ಸರ್ಕಾರದ ಮೇಲೆ ಕಾಂಗ್ರೆಸ್ ದಾಳಿ ನಡೆಸಿತು. ನೆಹರು 1889 ರಲ್ಲಿ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಇವರು 1964ರ ಮೇ 27 ರಂದು ಕೊನೆಯುಸಿರೆಳೆದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net