ಬಿರಿಯಾನಿ ಅಂಗಡಿಯಲ್ಲಿ ಮನುಷ್ಯನ ಶವ: ಲಖನೌ ಹೋಟೆಲ್‌ನಲ್ಲಿ ನಡೆದ ಈ ಭೀಕರ ಘಟನೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ! Biryani Shop

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ವೆಜ್​ ಬಿರಿಯಾನಿ ಅಂಗಡಿಯಲ್ಲಿ ಶವ ಪತ್ತೆ
  • ಲಖನೌನಿನ ಹೋಟೆಲ್​ನ ಫ್ರೀಜರ್​ನಲ್ಲಿದ್ದ ಶವ
  • ಪೊಲೀಸರಿಂದ ಮುಂದುವರೆದ ತನಿಖೆ
ಲಖನೌ: ಸಸ್ಯಹಾರಿಗಳಿಗೆ ಸದಾ ಒಂದು ಅನುಮಾನ ಇದ್ದೇ ಇರುತ್ತದೆ. ಅದೆನೆಂದರೆ ಮಾಂಸಹಾರಿ ಮತ್ತು ಸಸ್ಯಹಾರಿ ಎರಡು ಬಗೆಯ ಖಾದ್ಯ ದೊರೆಯುವ ಹೋಟೆಲ್​ಗಳಲ್ಲಿ ಎರಡೂ ವಿಧದ ಆಹಾರಗಳನ್ನು ತಯಾರಿಸುವಲ್ಲಿ ಒಂದೇ ಸೌಟು ಮತ್ತು ಪಾತ್ರೆಗಳನ್ನು ಬಳಸುತ್ತಾರೆ ಎಂಬ ಗುಮಾನಿ ಇರುತ್ತದೆ. ಆದರೆ ಇತ್ತೀಚೆಗೆ ಉತ್ತರಪ್ರದೇಶದ ಲಖನೌನಲ್ಲಿ ವರದಿಯಾದ ಸುದ್ದಿಯನ್ನು ಕೇಳಿದರೆ ಸಸ್ಯಹಾರಿಗಳು ಹೋಟೆಲ್​ಗೆ ಹೋಗುವುದನ್ನೇ ನಿಲ್ಲಿಸಿದರೂ ಅನುಮಾನವಿಲ್ಲ.

ಸಸ್ಯಹಾರಿ ಹೋಟೆಲ್​ನಲ್ಲಿ ಮಾನವನ ದೇಹ ಪತ್ತೆ!

ಲಖನೌನಿನ ಜಿಸಿಆರ್‌ಜಿ ಕಾಲೇಜಿನ ಎದುರಿಗೆ ಇದ್ದ ವೆಜ್​ ಬಿರಿಯಾನಿ (Biryani Shop) ಅಂಗಡಿಯೊಂದರ ಫ್ರೀಜರ್​ನಲ್ಲಿ ಮಾನವನ ದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಅಂಗಡಿ ಮಾಲೀಕನ ತಂದೆ ತೀರಿಹೋಗಿದ್ದು ಅನವು ನಾಲ್ಕು ದಿನಗಳಿಂದ ಅಂಗಡಿಗೆ ಬೀಗ ಹಾಕಿ ಹೋಗಿದ್ದಾನೆ. ನಂತರ ಅಂಗಡಿಗೆ ಮರಳಿದ ಮಾಲೀಕ ಫ್ರೀಜರ್​ನ್ನು ತೆಗೆದಾಗ ಅಲ್ಲಿ ಮನುಷ್ಯನ ದೇಹವಿರುವುದು ಗೊತ್ತಾದ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾನೆ.

ಮರಣೋತ್ತರ ಪರೀಕ್ಷೆಗೆ ಶವ ರವಾನೆ

ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ ಆ ವ್ಯಕ್ತಿಯ ದೇಹ ಹೇಗೆ ಅಂಗಡಿಯ ಫ್ರೀಜರ್​ನ್ನು ಸೇರಿತು ಎಂದು ತಿಳಿದುಬಂದಿಲ್ಲ. ಪೊಲೀಸರು ಅಂಗಡಿಯಲ್ಲಿದ್ದ ಸಿಸಿಟಿವಿ ಪೂಟೇಜ್​ನ್ನು ಪಡೆದುಕೊಂಡಿದ್ದು, ಅಂಗಡಿ ಮಾಲೀಕ ಮತ್ತು ಸ್ಥಳೀಯರನ್ನು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ.

ತನಿಖೆ ನಡೆಯುತ್ತಿದೆ: ಪೊಲೀಸ್​ ಆಯುಕ್ತ

ಈ ಪ್ರಕರಣದ ಕುರಿತು ಮಾಹಿತಿ ನೀಡಿರುವ ಉಪ ಪೊಲೀಸ್ ಆಯುಕ್ತ ಗೋಪಾಲ್ ಕೃಷ್ಣ ಚೌಧರಿ, ಮೃತ ವ್ಯಕ್ತಿ ಯಾರು? ಮತ್ತು ಈ ಕೊಲೆ ಹೇಗೆ ನಡೆದಿರಬಹುದು ಎಂದು ಪರೀಶಿಲಿಸಲಾಗುತ್ತಿದೆ. ಘಟನಾ ಸ್ಥಳದಿಂದ ಸಿಸಿಟಿವಿ ಪೂಟೇಜ್​ನ್ನು ಪಡೆದುಕೊಳ್ಳಲಾಗಿದ್ದು, ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಆಯುಕ್ತರು ತಿಳಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net