ಕೆಲವು ದಿನಗಳ ಹಿಂದೆಯಷ್ಟೇ ಹೊಸ ಹಾಗೂ ದುಬಾರಿ ಐಫೋನ್ ಮೊಬೈಲ್ ಅನ್ನು ಇಎಮ್‌ಐ (ಕಂತು) ಮೂಲಕ ಖರೀದಿ ಮಾಡಿದ್ದ ಕುನಾಲ್, ತನಗೆ ಕಂತುಗಳನ್ನು ಕಟ್ಟಲು ಹಣ ಕೊಡುವಂತೆ ತಂದೆ ಮತ್ತು ತಾಯಿಯೊಡನೆ ಜಟಾಪಟಿ ನಡೆಸಿದ್ದ. ಇದಕ್ಕೆ ಒಪ್ಪದ ಆತನ ತಾಯಿ ಸಂಗೀತಾ, ಯಾವುದೇ ಕಾರಣಕ್ಕೂ ಬೇಡ ಅರ್ಥ ಮಾಡಿಕೋ ಎಂದು ಮನವೋಲಿಸಲು ಪ್ರಯತ್ನಿಸಿದ್ದರು. ಆದ್ರೆ, ಇದ್ಯಾವುದಕ್ಕೂ ತಲೆ ಆಡಿಸದ ಕುನಾಲ್, ತಾನು ಸಾವಿಗೆ ಶರಣಾಗುವುದರ ಜತೆ ಪೋಷಕರನ್ನು ಕರೆದುಕೊಂಡ ಎಂದು ವಿವರಿಸಲಾಗಿದೆ. ಆದ್ರೆ, ಮೃತ ಸಂಗೀತಾ ಸಹೋದರಿ ಪಲ್ಲವಿ ಪಾಟೀಲ್ ಇದು ಸುಳ್ಳು ಎಂದು ವಾದಿಸಿದ್ದಾರೆ.