ಹಿಜಾಬ್ ಧರಿಸಿದ ಮಹಿಳೆ ದೇಶದ ಪ್ರಧಾನಿಯಾಗಲಿ: ಓವೈಸಿ ಹೊಸ ಬಾಂಬ್; ಮೊದಲು ನಿಮ್ಮ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಎಂದ ಬಿಜೆಪಿ | Prime Minister

 ಅಸಾದುದ್ದೀನ್ ಓವೈಸಿ, ಹಿಜಾಬ್​ ಧರಿಸಿದ ಮಹಿಳೆ,  ಶೆಹಜಾದ್ ಪೂನಾವಲ್ಲ
ಅಸಾದುದ್ದೀನ್ ಓವೈಸಿ, ಹಿಜಾಬ್​ ಧರಿಸಿದ ಮಹಿಳೆ, ಶೆಹಜಾದ್ ಪೂನಾವಲ್ಲ
Published on

ಪ್ರಮುಖ ಮುಖ್ಯಾಂಶಗಳು

  • ಹಿಜಾಬ್​ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗಬೇಕು
  • ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಪ್ರತಿ ಭಾರತೀಯ ದೇಶದ ಉನ್ನತೆ ಹುದ್ದೆ ಅಲಂಕರಿಸುವ ಹಕ್ಕನ್ನು ನೀಡಿದೆ
  • ಮೊದಲು ಹಿಜಾಬ್​ ಧರಿಸಿದ ಮಹಿಲೆಯನ್ನು ನಿಮ್ಮ ಪಕ್ಷದ ಅಧ್ಯಕ್ಷೆ ಮಾಡಿ : ಶೆಹಜಾದ್ ಪೂನಾವಲ್ಲ
ಮುಂಬೈ: ಒಂದು ದಿನ ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿ (Prime Minister) ಯಾಗುವುದನ್ನು ನೋಡುವುದು ತಮ್ಮ ಕನಸ್ಸೆಂದು AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಹಾರಾಷ್ಟ್ರದ ಸೋಲಾಪುರದಲ್ಲಿ ಮಾತನಾಡಿದ ಓವೈಸಿ, ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವ ಹಕ್ಕನ್ನು ಖಾತರಿಪಡಿಸುತ್ತದೆ ಎಂದರು.
ದ್ವೇಷ ಶಾಶ್ವತವಲ್ಲ
ನೀವು ಮುಸ್ಲಿಮರ ವಿರುದ್ಧ ಹರಡುತ್ತಿರುವ ದ್ವೇಷ ಹೆಚ್ಚು ಕಾಲ ಉಳಿಯುವುದಿಲ್ಲ. ದ್ವೇಷ ಹರಡುವವರು ಕೊನೆಗೊಳ್ಳುತ್ತಾರೆ. ಜನರ ಮನಸ್ಸಿನಲ್ಲಿ ಕರುಣೆ, ಸಹಬಾಳ್ವೆ ಜಾಗೃತವಾದಾಗ ದ್ವೇಷ ತಾನಗಿಯೇ ದೂರ ಸರಿಯುತ್ತೆ ಎಂದರು.

ಬಿಜೆಪಿ ತಿರುಗೇಟು

ಓವೈಸಿ ಈ ಹೇಳಿಕೆಗಳಿಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಲ್ಲ, ಹಿಜಾಬ್​ದಾರಿ ಮಹಿಳೆ ಭಾರತದ ಪ್ರಧಾನಿಯಾಗುವುದು ತಮ್ಮ ಕನಸ್ಸೆಂದು ಓವೈಸಿ ಹೇಳುತ್ತಾರೆ. ಇದಕ್ಕೆ ಸಂವಿಧಾನದ ಯಾವುದೇ ಅಡ್ಡಿಯಿಲ್ಲ. ಆದರೆ ಮೊದಲು ಹಿಜಾಬ್ ಧರಿಸಿದ ಮಹಿಳೆಯನ್ನು AIMIM ನ ಅಧ್ಯಕ್ಷರನ್ನಾಗಿ ಮಾಡಿ ಎಂದು ನಾನು ನಿಮಗೆ ಸವಾಲು ಹಾಕುತ್ತೇನೆ ಎಂದು ಎಕ್ಸ್​ (ಟ್ವಿಟರ್) ನಲ್ಲಿ ಪೋಸ್ಟ್‌ ಮಾಡಿದ್ದಾರೆ.
ಯುಎಪಿಎ ಕಾಯ್ದೆ ಜಾರಿ ಮಾಡಿದ್ದೇ ಕಾಂಗ್ರೆಸ್​
ಅದೇ ಪ್ರಚಾರದ ಸಮಯದಲ್ಲಿ, ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಲಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಗೆ ತಿದ್ದುಪಡಿಗಳ ಬಗ್ಗೆ ಓವೈಸಿ ತಮ್ಮ ಟೀಕೆಯನ್ನು ಪುನರುಚ್ಚರಿಸಿದರು. ದೆಹಲಿ ಗಲಭೆ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದನ್ನು ಉಲ್ಲೇಖಿಸಿ, ಇವರುಗಳು ವರ್ಷಗಳ ಕಾಲ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿರಲು ಕಾಂಗ್ರೆಸ್ ಸರ್ಕಾರದ ಕಾಯ್ದೆಯೇ ಕಾರಣ ಎಂದರು.
ಕಾಂಗ್ರೆಸ್​ನ ಈ ಕಾಯ್ದೆಯಿಂದಾಗಿ ಐದೂವರೆ ವರ್ಷಗಳಿಂದ ಜೈಲಿನಲ್ಲಿರುವ ಇಬ್ಬರು ಯುವಕರಿಗೆ ಜಾಮೀನು ಸಿಕ್ಕಿಲ್ಲ, ಸ್ವಾತಂತ್ರ್ಯದ ನಂತರ ಯಾವುದೇ ಕಾಂಗ್ರೆಸ್ ನಾಯಕರು ಇದೇ ರೀತಿಯ ಜೈಲು ಶಿಕ್ಷೆಯನ್ನು ಎದುರಿಸಿದ್ದಾರೆಯೇ ಎಂದು ಓವೈಸಿ ಪ್ರಶ್ನಿಸಿದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net