ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾ, ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಲಾಠಿ ಚಾರ್ಜ್, ಪೆಲೆಟ್ ಗನ್ ಬಳಕೆ ಹಾಗೂ ಅಶ್ರುವಾಯು ಸಿಡಿಸಿರುವ ಘಟನೆಗಳ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಭಾರತ ಪ್ರಜಾಪ್ರಭುತ್ವ ದೇಶ, ಇದು ಯಾರೊಬ್ಬರ ರಾಜ ದರ್ಬಾರಲ್ಲ. ಲಾಠಿ ಚಾರ್ಜ್, ಪೆಲೆಟ್ ಗನ್, ಟಿಯರ್ ಗ್ಯಾಸ್ ಬಳಸಲು ಆದೇಶ ಕೊಟ್ಟವರು ಯಾರು? ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ನಿರ್ಧಾರಗಳಿಗೆ ಹೊಣೆ ಹೊತ್ತುಳ್ಳಬೇಕು ಎಂದು ಆಗ್ರಹಿಸಿದ್ದಾರೆ (ಏಜೆನ್ಸೀಸ್).