25 ವರ್ಷದ ಹಿಂದೆ ಮೊಹಮ್ಮದ್ ಇಸ್ಮಾಯಿಲ್ ಮತ್ತು ಧರ್ಮಪುರಿಯ ಎಡ್ಲಾ ಲಚಣ್ಣ ಇಬ್ಬರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಎಡ್ಲಾ ಅವರ ಬಳಿ ಇಸ್ಮಾಯಿಲ್ ಅವರು ಹಣ ತೆಗೆದುಕೊಂಡಿದ್ದರು. ಭಾರತಕ್ಕೆ ಮರಳಿದ ತಕ್ಷಣ 25 ಸಾವಿರ ವಾಪಸ್ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ, ಇಬ್ಬರು ಭಾರತಕ್ಕೆ ಮರಳಿದರೂ ಕಾರಣಾಂತರದಿಂದ ಭೇಟಿ ಮಾಡೋದು ಸಾಧ್ಯವಾಗಲಿಲ್ಲ. ಕಾಲಾನಂತರದಲ್ಲಿ ಎಡ್ಲಾ ಲಚಣ್ಣ ರ ಮೊಬೈಲ್ ನಂಬರ್, ವಿಳಾಸ ಎಲ್ಲವೂ ನಾಶವಾಗಿತ್ತು. ಆದರೆ ಹಣ ಪಡೆದುಕೊಂಡಿದ್ದನ್ನು ಹೇಗೆ ವಾಪಸ್ ಮಾಡೋದು ಎಂದು ಪರಿತಪಿಸುತ್ತಿದ್ದರು.