'ಜೋ ಢರ್​ ಗಯಾ ವೋ ಮರ್​​ ಗಯಾ': ಸೋನಮ್​ ವಾಂಗ್ಚುಕ್​ ಉಪವಾಸ ವಿವಾದ; ಟ್ರೋಲ್​ ಮಾಡಿದವರಿಗೆ ಭಾಯ್​ ಜಾನ್​ ಖಡಕ್​ ತಿರುಗೇಟು! Salman Khan on Trolls

ಟ್ರೋಲ್​ ಮಾಡಿದವರಿಗೆ 'ಬ್ಯಾಡ್ ಬಾಯ್' ಶೈಲಿಯಲ್ಲಿ ಸಲ್ಮಾನ್ ಖಾನ್ ಖಡಕ್​ ತಿರುಗೇಟು
ಟ್ರೋಲ್​ ಮಾಡಿದವರಿಗೆ 'ಬ್ಯಾಡ್ ಬಾಯ್' ಶೈಲಿಯಲ್ಲಿ ಸಲ್ಮಾನ್ ಖಾನ್ ಖಡಕ್​ ತಿರುಗೇಟು
Published on

ಪ್ರಮುಖ ಮುಖ್ಯಾಂಶಗಳು

  • ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ ಮತ್ತು ಸಲ್ಮಾನ್ ಖಾನ್ ಟ್ವೀಟ್ ವಿವಾದ
  • ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಖಾನ್ ಟ್ರೋಲ್​
  • ಟ್ರೋಲ್​ ಮಾಡಿದವರಿಗೆ 'ಬ್ಯಾಡ್ ಬಾಯ್' ಶೈಲಿಯಲ್ಲಿ ಸಲ್ಮಾನ್ ಖಾನ್ ಖಡಕ್​ ತಿರುಗೇಟು
ಮುಂಬೈ: ನೀಟ್​ ಪರೀಕ್ಷೆ ಸೇರಿ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಉಪವಾಸ ನಡೆಸುತ್ತಿದ್ದ  ಪರಿಸರವಾದಿ ಸೋನಮ್ ವಾಂಗ್​​ಚುಕ್ 26 ದಿನಗಳ ನಂತರ ತಮ್ಮ ಸತ್ಯಾಗ್ರಹಗಳನ್ನು ಹಿಂಪಡೆದುಕೊಂಡರು.
ಆದರೆ, ಸೋನಮ್​ ವಾಂಗ್​ಚುಕ್​​ ತಮ್ಮ ಉಪವಾಸವನ್ನು ಕೈ ಬಿಡಲು ಬಾಲಿವುಡ್​ ನಟ ಸಲ್ಮಾನ್​ ಖಾನ್​ (Salman Khan on Trolls) ಕಾರಣ ಎಂದು ಸೋಷಿಯಲ್​ ಮೀಡಿಯಾನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದರ ಜೊತೆಗೆ ಸಲ್ಲು ಅವರನ್ನು ಟ್ರೋಲ್​ ಕೂಡ ಮಾಡಲಾಗಿತ್ತು. ಈಗ ಈ ಟ್ರೋಲ್​ ಮತ್ತು ಮೀಮ್​​ಗಳಿಗೆ ಸಲ್ಮಾನ್​ ಖಾನ್​ ತಮ್ಮದೇ ಬ್ಯಾಡ್​​ ಭಾಯ್​ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ.​​ 

ಸೋನಮ್​ ಬ್ರೋ, ಉಪವಾಸ ಸಾಕು!

ನೀಟ್​ ಪರೀಕ್ಷೆ ಅಕ್ರಮ ವಿರೋಧಿಸಿ, ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ದೇಶದಾದ್ಯಂತ ಬೆಂಬಲ ವ್ಯಕ್ತವಾಗುತ್ತಿದ್ದ ಹಿನ್ನಲೆ ನಟ ಸಲ್ಮಾನ್​ ಖಾನ್​ ಕೂಡ ಟ್ವಿಟ್​​ ಮಾಡಿದ್ದರು.
ಕೆಲ ಸಮಯದ ನಂತರ ಮತ್ತೆ ಟ್ವಿಟ್​ ಮಾಡಿದ ಸಲ್ಲು, ಸೋನಮ್​ ಬ್ರೋ, ಈ ಉಪವಾಸವನ್ನು ನಿಲ್ಲಿಸಿ ಮುಂದಿನ ದಿನಗಳಲ್ಲಿ ಮತ್ತೆ ಈ ಉಪವಾಸ ಮಾಡಿ, ಈಗ ನಿಲ್ಲಿಸಿ, ನಿಮಗೆ ಬೇಕಿದ್ದರೆ ನನ್ನ ಮನೆಯಿಂದಲೇ ಊಟವನ್ನು ಕಳಿಸುತ್ತೇನೆ ಎಂದಿದ್ದರು.
ಹಾಗೆಯೇ, ವಿದ್ಯಾರ್ಥಿಗಳೇ ಈ ಹೋರಾಟ ನಿಮಗೆ ಸಾಕು, ಮನೆಗೆ ತೆರಳಿ, ನಿಮ್ಮ ಪಾಲಕರು ನಿಮ್ಮ ಹಾದಿ ಕಾಯುತ್ತಿದ್ದಾರೆ ಎಂದು ಬರೆದಿದ್ದರು. ಈ ಟ್ವಿಟ್​ನಿಂದ ಕೆಲವೊಂದಿಷ್ಟು ಜನ ಸಲ್ಮಾನ್​ ಖಾನ್​ರನ್ನು ಟ್ರೋನ್​ ಮತ್ತು ಮೀಮ್​ ಮಾಡುತ್ತಿದ್ದರು. ಈಗ ಇವಕ್ಕೆಲ್ಲಾ ಸಲ್ಲು ಮಿಯಾ ಖಡಕ್​ ತಿರುಗೇಟು ನೀಡಿದ್ದಾರೆ. 

ಜೋ ಢರ್​ ಗಯಾ ವೋ ಮರ್​​ ಗಯಾ!

ಇಂದು ಟ್ವಿಟರ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಸಲ್ಮಾನ್​ ಖಾನ್​​, ಜಿಮ್​ನಲ್ಲಿ ಕಸರತ್ತು ಮುಗಿಸಿ ಕನ್ನಡಿ ಮುಂದೆ ನಿಂತು ಫೋಟೊವೊಂದನ್ನು ಹಂಚಿಕೊಂಡಿದ್ದು, ಅದರ ಕೆಳಗೆ ಜೋ ಢರ್​​ ಗಯಾ ವೋ ಮರ್​ ಗಯಾ! (ಯಾರು ಹೆದರಿದರೋ ಅವರು ಸತ್ತರು) ಎಂದು ತಮ್ಮನ್ನು ಟ್ರೋಲ್​ ಮಾಡಿದವರಿಗೆಲ್ಲಾ ಹೆದರು ಜಾಯಮಾನ ತನ್ನದಲ್ಲ ಎಂಬ ಧಾಟಿಯಲ್ಲಿ ಸಲ್ಮಾನ್ ಪ್ರತಿಕ್ರಿಯಿಸಿದ್ದಾರೆ, (ಏಜನ್ಸೀಸ್​). ​ 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net