ಈ ಮರುಚುನಾವಣೆಯ ಕಣದಲ್ಲಿ ಒಟ್ಟು ಆರು ಅಭ್ಯರ್ಥಿಗಳಿದ್ದು, ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಜಹಾಂಗೀರ್ ಖಾನ್ ಮಂಗಳವಾರ (ಮೇ 19) ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದರು. ಜಹಾಂಗೀರ್ ಖಾನ್ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರೂ, ಅಧಿಕೃತವಾಗಿ ನಾಮಪತ್ರ ಹಿಂಪಡೆಯುವ ಅವಧಿ ಮುಗಿದಿದ್ದರಿಂದ ಅವರ ಹೆಸರು ಇವಿಎಂ (EVM) ಯಂತ್ರಗಳಲ್ಲೇ ಮುಂದುವರಿದಿದೆ. ಕಣದಲ್ಲಿರುವ ಇತರ ಪ್ರಮುಖ ಅಭ್ಯರ್ಥಿಗಳಲ್ಲಿ ಬಿಜೆಪಿಯ ದೆಬಾಂಗ್ಶು ಪಾಂಡಾ, ಸಿಪಿಐ(ಎಂ)ನ ಶಂಭು ನಾಥ್ ಕುರ್ಮಿ ಮತ್ತು ಕಾಂಗ್ರೆಸ್ನ ಅಬ್ದುರ್ ರಜಾಕ್ ಮೊಲ್ಲಾ ಸೇರಿದ್ದಾರೆ.