ಈ ಭೇಟಿಯ ಕುರಿತಾಗಿ ತಮ್ಮ ಎಕ್ಸ್ ಖಾತೆಯ ಮೂಲಕ ಹಿಂದಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಇಸ್ರೇಲ್ನ ಮಾಜಿ ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕ ಯೈರ್ ಲ್ಯಾಪಿಡ್, ಇಡೀ ಇಸ್ರೇಲ್ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಉತ್ಸುಕವಾಗಿದ್ದು, ಅವರು ಇಸ್ರೇಲ್ನ ನಿಜವಾದ ಸ್ನೇಹಿತ, ಉಭಯ ದೇಶಗಳ ನಡುವಿನ ಸಂಬಂಧವು ಕೇವಲ ಕಾರ್ಯತಂತ್ರದ ಸಂಬಂಧವಲ್ಲ, ಬದಲಾಗಿ ರಾಷ್ಟ್ರಗಳ ನಡುವಿನ ಆಳವಾದ ಸ್ನೇಹದ ಬಂಧವಾಗಿದೆ ಎಂದು ಬರೆದಿದ್ದಾರೆ.