ಠಾಕ್ರೆ ನೇತೃತ್ವದ ಶಿವಸೇನಾ ಆಂತರಿಕ ಬಿಕ್ಕಟ್ಟು: ಇಂದು ಆರು ಸಂಸದರು ಅಧಿಕೃತವಾಗಿ ಬಂಡಾಯ ಘೋಷಿಸುವ ಸಾಧ್ಯತೆ | Shiv Sena
ಉದ್ದವ್ ಠಾಕ್ರೆ
Published on:
Copied
Follow Us
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಆಪರೇಷನ್ ಟೈಗರ್ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಹಲವು ದಿನಗಳ ಊಹಾಪೋಹಗಳು, ಆರೋಪಗಳ ಬಳಿಕ ಇಂದು(ಜೂ. 21) ಠಾಕ್ರೆ ನೇತೃತ್ವದ ಶಿವಸೇನೆಯ(Shiv Sena) ಆರು ಸಂಸದರು ಅಧಿಕೃತವಾಗಿ ಬಂಡಾಯ ಘೋಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಬಂಡಾಯ ಸಂಸದರು ಭಾನುವಾರ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೊಂದಿಗಿನ ಭೇಟಿಯ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಹಾಗೂ ಅವರಿಗೆ ಸಲ್ಲಿಸಿದ ತಮ್ಮ ಬೇಡಿಕೆಯ ಪತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನೂ ಉದ್ಧವ್ ಠಾಕ್ರೆ ಬಣದಿಂದ ಯಾವ ಕಾರಣಕ್ಕಾಗಿ ತಾವು ಬಂಡಾಯ ಎಂಬುದರ ಬಗ್ಗೆ ತಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಬಂಡಾಯ ಸಂಸದರಾದ ಸಂಜಯ್ ಜಾಧವ್, ಸಂಜಯ್ ದೇಶಮುಖ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕ್ಚೌರೆ, ನಾಗೇಶ್ ಪಾಟೀಲ್ ಅಶ್ಟಿಕರ್ ಹಾಗೂ ಸಂಜಯ್ ದಿನಾ ಪಾಟೀಲ್ ಜೂನ್ 16ರಂದು ದೇಶದ ವಿವಿಧ ಭಾಗಗಳಿಂದ ದೆಹಲಿಗೆ ವಿಮಾನದಲ್ಲಿ ತೆರಳಿ ನೋಯ್ಡಾದ ಹೋಟೆಲ್‌ನಲ್ಲಿ ತಂಗಿದ್ದರು ಎನ್ನಲಾಗಿದೆ.
ಅಲ್ಲಿ ಉಪಮುಖ್ಯಮಂತ್ರಿ ಮತ್ತು ಶಿವಸೇನಾ ಮುಖ್ಯಸ್ಥ ಏಕನಾಥ್ ಶಿಂಧೆ ಮತ್ತು ಅವರ ಪುತ್ರ ಶ್ರೀಕಾಂತ್ ಶಿಂಧೆ ಜೊತೆ ಭೇಟಿಯಾಗಿದ್ದರು. ಮರುದಿನ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಎಲ್ಲಾ ಆರು ಸಂಸದರು ಭೇಟಿಯಾಗಿ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ತಾವು ವಿಲೀನಗೊಳ್ಳುತ್ತಿರುವುದಾಗಿ ಪತ್ರವನ್ನು ಸಲ್ಲಿಸಿದ್ದಾರೆ. ಮತ್ತು ಸದನದಲ್ಲಿ ತಮ್ಮ ಆಸನಗಳನ್ನು ಬದಲಾಯಿಸುವಂತೆ ವಿನಂತಿಸಿದ್ದಾರೆ ಎನ್ನಲಾಗಿದೆ.
ಬಳಿಕ ಆರು ಸಂಸದರು ಚೆನ್ನೈ, ವಾರಣಾಸಿ, ಪುಣೆ ಮತ್ತು ಮುಂಬೈ ಸೇರಿದಂತೆ ವಿವಿಧ ಸ್ಥಳಗಳಿಗೆ ವಿಮಾನದಲ್ಲಿ ತೆರಳಿದ್ದರು ಎನ್ನಲಾಗಿದೆ. ಇಂದಿನ ಪತ್ರಿಕಾಗೋಷ್ಠಿಗೆ ಇಬ್ಬರು ಸಂಸದರು ಚೆನ್ನೈನಿಂದ ಮತ್ತು ಇಬ್ಬರು ಕೋಲ್ಕತ್ತಾದಿಂದ ಮುಂಬೈಗೆ ಆಗಮಿಸಲಿದ್ದಾರೆ. ಒಬ್ಬರು ಈಗಾಗಲೇ ಮುಂಬೈನಲ್ಲಿದ್ದು, ಮತ್ತು ಇನ್ನೊಬ್ಬರು ಪುಣೆಯಲ್ಲಿದ್ದಾರೆ. ಸುದ್ದಿಗೋಷ್ಠಿ ಬಳಿಕ ಏಕನಾಥ್ ಶಿಂಧೆ ಭೇಟಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ (ಏಜೆನ್ಸೀಸ್).