ಅಂದು ತಂದೆಗೆ ಜ್ಯೂಸ್ ಕುಡಿಸಿದ್ದ ಇಂದಿರಾ ಗಾಂಧಿ: 19 ನೇ ದಿನಕ್ಕೆ ಕಾಲಿಟ್ಟ ವಾಂಗ್​ಚುಕ್​ ಉಪವಾಸ; ಲಡಾಖ್​​ ಜನರಿಗಾಗಿ ಹೋರಾಡಿದ್ದ ಸೋನಮ್​ ವಾಂಗ್ಯಾಲ್​​! Sonam Wangchuk Hunger Strike

19ನೇ ದಿನಕ್ಕೆ ಕಾಲಿಟ್ಟ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ
19ನೇ ದಿನಕ್ಕೆ ಕಾಲಿಟ್ಟ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ
Published on

ಪ್ರಮುಖ ಮುಖ್ಯಾಂಶಗಳು

  • ನೀಟ್ ಪರೀಕ್ಷೆ ಅಕ್ರಮ ವಿರೋಧಿಸಿ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 19ನೇ ದಿನಕ್ಕೆ
  • ಅಂದು ತಂದೆ ಸೋನಮ್ ವಾಂಗ್ಯಾಲ್‌ಗೆ ಜ್ಯೂಸ್ ಕುಡಿಸಿದ್ದ ಇಂದಿರಾ ಗಾಂಧಿ
  • ವಾಂಗ್​ಚುಕ್​ ಸಾಯದಂತೆ ನೋಡಿಕೊಳ್ಳಿ ಎಂದ ದೆಹಲಿ ಹೈಕೋರ್ಟ್​
ನವದೆಹಲಿ: ದೇಶದಲ್ಲಿ ನೀಟ್​ (NEET) ಸೇರಿದಂತೆ ಹಲವಾರು ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಯನ್ನು ಆಗ್ರಹಿಸಿ ಪರಿಸರವಾದಿ ಸೋನಮ್​ ವಾಂಗ್​ಚುಕ್​ (Sonam Wangchuk Hunger Strike) ದೆಹಲಿಯ ಜಂತರ್​ ಮಂತರ್​ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ವಾಂಗ್​ಚುಕ್​ ಅವರ ಉಪವಾಸ ಸತ್ಯಾಗ್ರಹ ಇಂದಿಗೆ (ಜು.16) 19 ನೇ ದಿನವನ್ನು ಪ್ರವೇಶಿಸಿದ್ದು, ಇಲ್ಲಿವರೆಗೆ ಅವರು ಸುಮಾರು 9 ಕಿ.ಲೋ ತೂಕವನ್ನು ಕಳೆದುಕೊಂಡಿದ್ದಾರೆ. ಸೋಮನ್​ ವಾಂಗ್​ಚುಕ್​ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಂದರ್ಭದಲ್ಲಿ ಅವರ ತಂದೆ ಸೋನಮ್​ ವಾಂಗ್ಯಾಲ್​ ಅವರು ನಡೆಸಿದ್ದ ಉಪವಾಸ ಸತ್ಯಗ್ರಹವನ್ನು ಹಲವರು ನೆನಪಿಸಿಕೊಳ್ಳುತ್ತಿದ್ದಾರೆ.

ಲಡಾಖ್​​ ಜನರಿಗಾಗಿ ಉಪವಾಸ ಮಾಡಿದ್ದ ಸೋನಮ್​ ವಾಂಗ್ಯಾಲ್​!

1984 ರಲ್ಲಿ ಸೋನಮ್​ ವಾಂಗ್​ಚುಕ್​ ಅವರ ತಂದೆ ಸೋಮನ್​ ವಾಂಗ್ಯಾಲ್​ ಅವರು ಲಡಾಖ್​ನ ಸಮೂದಾಯಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ಸತ್ಯಾಗ್ರಹ ಐದನೇ ದಿನಕ್ಕೆ ಕಾಲಿಡುತ್ತಿದ್ದಂತೆ ಅಂದಿನ ಪ್ರಧಾನಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ತಮ್ಮ ಕೈಯಾರೆ ವಾಂಗ್ಯಾಲ್​ ಅವರಿಗೆ ಜ್ಯೂಸ್​ ಕುಡಿಸುವ ಮೂಲಕ ಅವರ ಮನವಿಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು.
ವಾಂಗ್​ಚುಕ್​ ಸಾಯದಂತೆ ನೋಡಿಕೊಳ್ಳಿ!
ಸೋನಮ್​ ವಾಂಗ್​ಚುಕ್​ ಅವರ ಉಪವಾಸ 18 ನೇ ದಿನ ತಲುಪಿದ ಹಿನ್ನಲೆ, ಈ ಉಪವಾಸ ಸತ್ಯಾಗ್ರಹ ಹೀಗೆ ಮುಂದುವರಿದರೆ ಸೋನಮ್​ ವಾಂಗ್​ಚುಕ್​ ಸಾಯುತ್ತಾರೆಂದು, ಕೇಂದ್ರ ಸರ್ಕಾರ ಈ ಕುರಿತು ಏನಾದರೂ ಕ್ರಮ ತೆಗೆದುಕೊಳ್ಳಬೇಕೆಂದು ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​, ಪ್ರತಿಯೊಬ್ಬ ಪ್ರಜೆಯ ಜೀವ ಅಮೂಲ್ಯವಾಗಿದ್ದು, ಸೋನಮ್​ ವಾಂಗ್​ಚುಕ್​ ಅವರ ಪ್ರಾಣವನ್ನು ಉಳಿಸಲು ಬೇಕಾದ ಎಲ್ಲಾ ವೈಧ್ಯಕೀಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬಹುದು ಎಂದು ನ್ಯಾಯಾಲಯ ಆದೇಶಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net