ಭಾರತ ದಾಳಿ ಮಾಡಿದರೆ ಕಲ್ಕತ್ತಾವರೆಗೂ ನುಗ್ಗುತ್ತೇವೆ: ಪಾಕ್​ ರಕ್ಷಣಾ ಸಚಿವ ಖ್ವಾಜಾ ಆಸೀಫ್​ ವಾರ್ನಿಂಗ್​! Khawaja Asif

ಭಾರತದ ರಕ್ಷಣಾ ಸಚಿವರ ಮಾತಿಗೆ ಕೌಂಟರ್​ ನೀಡಿದ ಪಾಕ್​ ರಕ್ಷಣಾ ಸಚಿವ
ಭಾರತದ ರಕ್ಷಣಾ ಸಚಿವರ ಮಾತಿಗೆ ಕೌಂಟರ್​ ನೀಡಿದ ಪಾಕ್​ ರಕ್ಷಣಾ ಸಚಿವ
Published on

ಪ್ರಮುಖ ಮುಖ್ಯಾಂಶಗಳು

  • ಭಾರತ ನಮ್ಮ ಮೇಲೆ ದಂಡೆತ್ತಿ ಬಂದರೆ ನಾವು ಸುಮ್ಮನಿರಲ್ಲ
  • ನಾವು ಕಲ್ಕತ್ತಾ ಬಾಂಬೆವರೆಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದ್ದೆವೆ : ಖ್ವಾಜಾ ಆಸೀಫ್​
  • ಭಾರತದ ರಕ್ಷಣಾ ಸಚಿವರ ಮಾತಿಗೆ ಕೌಂಟರ್​ ನೀಡಿದ ಪಾಕ್​ ರಕ್ಷಣಾ ಸಚಿವ
ಪಾಕಿಸ್ತಾನ: ಭಾರತ ನಮ್ಮ (ಪಾಕಿಸ್ತಾನ) ಮೇಲೆ ಏನಾದರೂ ಸುಖಾ-ಸುಮ್ಮನೆ ದಾಳಿ ನಡೆಸಿದರೆ, ನಾವು ಕಲ್ಕತ್ತಾದವರೆಗೂ ಆಕ್ರಮಣ ನಡೆಸಲು ಸಿದ್ಧರಿದ್ದೆವೆ ಎಂದು ಪಾಕಿಸ್ತಾದ ರಕ್ಷಣಾ ಸಚಿವ ಖ್ವಾಜಾ ಆಸೀಫ್​ (Khawaja Asif) ಎಚ್ಚರಿಕೆ ನೀಡಿದ್ದಾರೆ.
ಸಿಲಾಕೋಟ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಸೀಫ್​, ಯಾರೊ ನಾಲ್ಕು ಜನರನ್ನು ಕೊಂದು ಇವರು ಭಯೋತ್ಪಾದಕರು, ಇವರು ಪಾಕಿಸ್ತಾನದವರು ಎಂದು ಹೇಳಿ ನಮ್ಮ ಮೇಲೆ ಅಕ್ರಮಣ ಮಾಡಿದರೆ ನಾವು ಸುಮ್ಮನೆ ಕುಳಿತು ಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತದ ನಮ್ಮ ಮೇಲೆ ವಿನಾಕಾರಣ ದಾಳಿ ಮಾಡಿದ್ದೇ ನಿಜವಾದರೆ ಪರಿಸ್ಥಿತಿ ಗಂಭೀರ ರೂಪ ಪಡೆದುಕೊಳ್ಳುತ್ತದೆ ಹಾಗೆಯೇ ನಾವು ಕಲ್ಕತ್ತಾ, ಬಾಂಬೆವರೆಗೆ ದಂಡೆತ್ತಿ ಹೋಗುತ್ತೇವೆ ಎಂದು ಪಾಕ್​ ರಕ್ಷಣಾ ಸಚಿನ ಹೇಳಿದ್ದಾರೆ.

ಪಾಕ್​ ಮೇಲೆ ದಾಳಿಯ ಮುನ್ಸೂಚನೆ ನೀಡಿದ ರಾಜ್​ನಾಥ್​ ಸಿಂಗ್​

ಕೆಲ ದಿನಗಳ ಹಿಂದೆ ಕೇರಳದಲ್ಲಿ ಮಾತನಾಡುತ್ತಾ, ನಮ್ಮ ನೆರೆ ದೇಶ ಈಗ ಕೆಟ್ಟ ಪರಿಸ್ಥಿತಿಯಲ್ಲಿದೆ. ಆದರೆ ಅದರ ಬುದ್ಧಿ ಸರಿಯಿಲ್ಲ. ಅವರು ಯಾವಾಗಲೂ ನಮ್ಮ ಮೇಲೆ ದ್ವೇಷ ಕಾರುತ್ತಾ ಇರುತ್ತಾರೆ. ಈ ಭಾರಿ ಏನಾದರೂ ಹೆಚ್ಚು-ಕಡಿಮೆ ಮಾಡಿದರೆ ನಮ್ಮ ದಾಳಿಯ ಪರಿಣಾಮ ಹೇಗಿರುತ್ತದೆ ಎಂದು ಈಡೀ ವಿಶ್ವವೇ ನೋಡುತ್ತದೆ ಎಂದು ಸಿಂಗ್​, ಪರೋಕ್ಷವಾಗಿ ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದ್ದರು.
ಆಪರೇಷನ್​ ಸಿಂಧೂರ್​ ಇನ್ನೂ ಮುಗಿದಿಲ್ಲ!
ಇದೇ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವ ಸಿಂಗ್​, ಆಪರೇಷನ್​ ಸಿಂಧೂರ್​ ಇನ್ನೂ ಸಂಪೂರ್ಣವಾಗಿ ಸಮಾಪ್ತಿಯಾಗಿಲ್ಲ, ಕಾರ್ಯಾಚರಣೆಯ ಕಾರ್ಯವಿಧಾನ ಬದಲಾಗಿದೆ ಅಷ್ಟೇ ಎಂದಿದ್ದರು.
2025 ರ ಮೇ ತಿಂಗಳಲ್ಲಿ ಕಾಶ್ಮೀರದ ಪಹಲ್ಗಾಮ್​ನಲ್ಲಿ ಹಿಂದೂಗಳನ್ನು ಧರ್ಮದ ಆಧಾರದಲ್ಲಿ ಹತ್ಯೆ ಮಾಡಿದ್ದ ಹಿನ್ನಲೆಯಲ್ಲಿ ಈ ಆಪರೇಷನ್ ಸಿಂಧೂರ್​ನ್ನು ಆರಂಭಿಸಲಾಗಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಾಲ್ಕು ದಿನ ನಡೆದ ಈ ಕಾರ್ಯಾಚರಣೆಯಲ್ಲಿ ನೂರಾರು ಜನ ಭಯೋತ್ಪಾದಕರು ಹಾಗೂ ಹಲವಾರು ಭಯೋತ್ಪಾದನಾ ಲಾಂಚ್​ಪ್ಯಾಡ್​ಗಳು ನಾಶವಾಗಿದ್ದವು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net