ರಾಮ ಮಂದಿರದ ದೇಣಿಗೆ ಕದ್ದ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ವಿಶ್ರಮಿಸುವುದಿಲ್ಲ: ಮಾಜಿ ಸಿಎಂ ಕೇಜ್ರಿವಾಲ್ | Ex CM Kejriwal

ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್
ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್
Published on
ಅಯ್ಯೋಧ್ಯೆ: ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಆಪ್ ಮುಖ್ಯಸ್ಥ ಮತ್ತು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್(Ex CM Kejriwal), ರಾಮ ಮಂದಿರದ ದೇಣಿಗೆ ಕಳ್ಳತನದ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ವಿಶ್ರಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಣಿಗೆ ಕಳ್ಳತನವನ್ನು ಪ್ರತಿಭಟಿಸಿ ಆಪ್​ ವಿವಿಧ ದೇವಸ್ಥಾನಗಳಲ್ಲಿ ಸುಂದರಕಾಂಡ ಪಠಣ ನುಡಿಸುವ ಅಭಿಯಾನ ನಡೆಸಿದ್ದು, ಅದರಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪತ್ನಿಯೂ ಭಾಗವಹಿಸಿ ಪಠಣ ಮಾಡಿದ್ದರು. ಈ ಬಗ್ಗೆ ಟೀಕಿಸಿದ್ದ ದೆಹಲಿ ಬಿಜೆಪಿ ಘಟದಕ ಮುಖ್ಯಸ್ಥರು ಇದನ್ನು ರಾಜಕೀಯ ಗಿಮಿಕ್ ಎಂದು ಕಿಡಿಕಾರಿದ್ದರು.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಕಲಿಯುಗದಲ್ಲಿ ರಾಕ್ಷಸ ಗುಣ ಹೊಂದಿರುವವರು ಮಾತ್ರ ಸುಂದರಕಾಂಡ ಪಠಣವನ್ನು ವಿರೋಧಿಸುತ್ತಾರೆ. ಭಗವಾನ್ ಶ್ರೀರಾಮನ ಮನೆಯಿಂದ ಕದ್ದವರನ್ನು ಶಿಕ್ಷಿಸುವ ಉದ್ದೇಶದಿಂದ ನಾವು ಇಂದು ಸುಂದರಕಾಂಡ ಪಠಣವನ್ನು ಆಯೋಜಿಸಿದ್ದೇವೆ. ಆರೋಪಿಗಳನ್ನು ಗಲ್ಲಿಗೇರಿಸುವವರೆಗೂ ಅವರು ವಿಶ್ರಮಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ದೆಹಲಿಯ ಜಪಾನೀಸ್ ಪಾರ್ಕ್‌ನಲ್ಲಿ ಭಾನುವಾರ(ಜು. 12) ಎಎಪಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಮತಗಳಿಗಾಗಿ ರಾಮನ ಹೆಸರನ್ನು ಬಳಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net