'ನಾನು ಬೀದಿ ಹೋರಾಟಗಾರ'; ಕಾಂಗ್ರೆಸ್​ ಸಂಸದ ಜೈರಾಮ್​ ರಮೇಶ್​ಗೆ ಟಾಂಗ್​ ಕೊಟ್ಟ ಧರ್ಮೇಂದ್ರ ಪ್ರಧಾನ್​..Dharmendra Pradhan

Dharmendra Pradhan hits back at Congress MP in Parliament
Dharmendra Pradhan hits back at Congress MP in Parliament
Published on

ಪ್ರಮುಖ ಮುಖ್ಯಾಂಶಗಳು

  • ಇದೆಲ್ಲ ಇದ್ದಿದ್ದೆ ಬಿಡಿ ಎಂದ ಕಾಂಗ್ರೆಸ್​ ಸಂಸದ ಜೈರಾಮ್​ ರಮೇಶ್​ಗೆ ಟಾಂಗ್​​ ಕೊಟ್ಟ ಧರ್ಮೇಂದ್ರ ಪ್ರಧಾನ್.
  • ನಾವು ಎಸಿಯಲ್ಲಿ ಕುಳಿತು ಕೆಲಸ ಮಾಡುವ ಕಾರ್ಯಕರ್ತರಲ್ಲ ಎಂದ ಧರ್ಮೇಂದ್ರ ಪ್ರಧಾನ್​.
  • ಸಂಸತ್​ ಆವರಣದಲ್ಲಿ ಬಿಜೆಪಿ ನಾಯಕರಿಂದ ಧರ್ಮೇಂದ್ರ ಪ್ರಧಾನರಿಗೆ ಶಾಲು ಹೊದಿಸಿ ಆದರದ ಸ್ವಾಗತ.
Dharmendra Pradhan hits back at Congress MP in Parliament:ಕೇಂದ್ರ ಶಿಕ್ಷಣ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಸೋಮವಾರ(ಜು.27)ರಂದು ಸಂಸತ್​ನಲ್ಲಿ ಧರ್ಮೇಂದ್ರ ಪ್ರಧಾನ್​ ಕಾಣಿಸಿಕೊಂಡರು, ಅವರು ಕಾಣಿಸಿಕೊಳ್ಳುತ್ತಲೇ ಬಿಜೆಪಿ ನಾಯಕರು ಅವರಿಗೆ ಸಾಂಪ್ರದಾಯಿಕ ಪೇಟ ಹಾಕಿ, ಶಾಲು ಹೊದಿಸಿ ಸಂಭ್ರಮದಿ ಸ್ವಾಗತಕೊಟ್ಟರು. ಈ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಕಾಂಗ್ರೆಸ್​ ಸಂಸದರಿಗೆ ಟಾಂಗ್​ ಕೊಟ್ಟಿದ್ದಾರೆ. 

ನಾವು ಎಸಿಯಲ್ಲಿ ಕೂರೋರಲ್ಲ

ಸಂಸತ್ತಿನ ಆವರಣದಲ್ಲಿ  ಎದುರಾದ   ಕಾಂಗ್ರೆಸ್​​​ ಸಂಸದ ಜೈರಾಮ್​ ರಮೇಶ್​ ಅವರು,  ಇ9ದೆಲ್ಲ ನಡೆಯುತ್ತಿರುತ್ತದೆ ಬಿಡಿ ವ್ಯಂಗ್ಯವಾಗಿ  ಮಾತನಾಡಿ, ಸಮಾಧಾನ ಪಡಿಸಲು ಮುಂದಾದರು. ಆಗ ತಕ್ಷಣ ಸುಮ್ಮನಾಗದ ಧರ್ಮೇಂದ್ರ ಪ್ರಧಾನ್​ ಅವರು ಏನೂ ಆಗಿಲ್ಲ, ನಾನೊಬ್ಬ ಬೀದಿ ಹೋರಾಟಗಾರ, ಎಸಿ ಕೊಠಡಿಯಲ್ಲಿ ಕೂತು ಕೆಲಸ ಮಾಡುವ ಕಾರ್ಯಕರ್ತನಲ್ಲ ಎಂದು ಟಾಂಗ್​ ಕೊಟ್ಟಿದ್ದಾರೆ. 

ಶಾಲು ಹೊದಿಸಿ ಸ್ವಾಗತ

ಸಂಸತ್​ ಆವರಣಕ್ಕೆ ಧರ್ಮೇಂದ್ರ ಪ್ರಧಾನ್​ ಅವರು ಕಾರಿನಿಂದ ಬಂದು ಇಳಿಯುತ್ತಿದ್ದಂತೆ ಬಿಜೆಪಿ ನಾಯಕರು ಅವರನ್ನು ಸುತ್ತುವರೆದು, ಆದರಿಂದ ಸ್ವಾಗತಿಸಿದರು. ಅವರಿಗೆ  ಶಾಲು ಹೊದಿಸಿ, ಪೇಟ ಇಟ್ಟು  ಸನ್ಮಾನಿಸಿದರು. ಅಲ್ಲದೇ ಪ್ರತ್ಯಕ್ಷ ಅಥವಾ ನೇರವಾಗಿ ಯಾವುದೇ ಆರೋಪವನ್ನು ಹೊತ್ತಿಲ್ಲದಿದ್ದರೂ. ಪಕ್ಷಕ್ಕಾಗಿ ನೈತಿಕ ಹೊಣೆ ಹೊತ್ತು, ವಿದ್ಯಾರ್ಥಿಗಳಿಗಾಗಿ ರಾಜೀನಾಮೆ ನೀಡಿರುವ ಅವರ ನಿರ್ಧಾರವನ್ನು ಪ್ರಶಂಸಿಸಿ ಬಿಜೆಪಿ ನಾಯಕರು ಮಾತನಾಡಿದರು. 
ಉಸ್ತುವಾರಿಯಾಗಿ ಕೆಲಸ
2026ರಲ್ಲಿ  ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಜಯಗಳಿಸಿತ್ತು. ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಧಾನ್​ ಅವರಿಗೆ ನೀಡಲಾಗಿತ್ತು. ಅಷ್ಟೇ ಅಲ್ಲದೇ ಬಿಹಾರದ ವಿಧಾನಸಭಾ ಚುನಾವಣೆ ಉಸ್ತುವಾರಿಯನ್ನು ಸಹ ಪ್ರಧಾನ್​ ಹೊತ್ತಿದ್ದರು.  ಧರ್ಮೇಂದ್ರ  ಪ್ರಧಾನ್​ ಅವರು ಮಧ್ಯಪ್ರದೇಶ, ಉತ್ತರಾಖಂಡ ಹಾಗೂ ಕರ್ನಾಟಕ ಉಸ್ತುವಾರಿಯಾಗಿ ನೇಮಕಗೊಂಡಿದ್ದರು.  ಆ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಕಂಡುಕೊಂಡಿತ್ತು.
ನೀಟ್​ ಪ್ರಶ್ನೆ ಪತ್ರಿಕೆ ಲೀಕ್ ರಾಜೀನಾಮೆ
ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉಂಟಾದ ಲೋಪದೋಷಗಳ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್​ ಜನತಾ ಪಾರ್ಟಿ ರಾಜೀನಾಮೆ ನೀಡಿತ್ತು. 37 ದಿನ ನಡೆಸಿದ ಪ್ರತಿಭಟನೆಯ ಫಲವಾಗಿ ಶನಿವಾರ ಮಧ್ಯಾಹ್ನ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಟ್ಟರು. ಇದು ಝೆನ್​ ಜಿಗಳ ಜಯ ಎಂದು  ಹಲವರು ಪ್ರಶಂಸಿದ್ದರು.
ಕಾಕ್ರೋಚ್​ ಜನತಾ ಪಾರ್ಟಿಯ ಈ ಹೋರಾಟಕ್ಕೆ. ಪೊಲೀಸರಿಂದ ದಾಳಿಗೆ ಒಳಗಾದರೂ ಮತ್ತೆ ಮೊಗದಲ್ಲಿ ಸಂತಸವಿಟ್ಟುಕೊಂಡು ನಡೆಸಿದ ಪ್ರತಿಭಟನೆಗೆ ಬಾಲಿವುಡ್​ ನಟ, ನಟಿಯರು, ಸೌತ್​​​ ನಟಿಯರು ಹಾಗೂ ಗಾಯಕರು, ಸಾಹಿತಿಗಳು ಬೆಂಬಲ ಕೊಟ್ಟಿದ್ದರು. ಅಲ್ಲದೆ ಕೆಲವು ಬಿಜೆಪಿ ನಾಯಕರ ಮಕ್ಕಳು ಈ ಹೋರಾಟದಲ್ಲಿ ಭಾಗಿ ಬೆಂಬಲ ವ್ಯಕ್ತಪಡಿಸಿದರು.  ಪರಿಸರ ಹೋರಾಟಗಾರ ಸೋನಮ್​ ವಾಂಗ್​ಚುಕ್​ 22ದಿನಗಳ ಕಾಲ ಉಪವವಾಸ ಸತ್ಯಾಗ್ರಹ ಕೈಗೊಂಡಿದ್ದರು. ಇವರೊಂದಿಗೆ ಕೆಲವು ವಿದ್ಯಾರ್ಥಿಗಳು ಸಹ ನಿರಶನ ಕೈಗೊಂಡಿದ್ದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net