ಸಿಯಾಳ ಕೊಲೆ ಸಂಚು ಬಯಲು ಮಾಡಿದ್ದು ಕೇತನ್​ ಸಹೋದರಿ; ಭಾವಿ ಪತ್ನಿಯ ನಾಟಕ ತಿಳಿದಿದ್ದು ಹೇಗೆ?..Ketan Agarwal

Ketan Agarwal Murder Plot By Fiancee
Ketan Agarwal Murder Plot By Fiancee
Published on

ಪ್ರಮುಖ ಮುಖ್ಯಾಂಶಗಳು

  • ಕೇತನ್​ ಸಹೋದರಿ, ಸಿಯಾಳ ನಡುವೆ ನಡೆದ ಮಾತುಕತೆಯೇ ಕೊಲೆಯ ಸಂಚನ್ನು ಬಯಲು ಮಾಡಿದ್ದು
  • ಅನುಭವಿ ಟ್ರೆಕ್ಕರ್​​ ಕಂದಕಕ್ಕೆ ಬೀಳೋದು ಹೇಗೆ ಸಾಧ್ಯ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದ ವಿಶಾಲ್​ ಅಗರ್ವಾಲ್​
  • ಆರು ತಿಂಗಳಲ್ಲಿ 2004 ಕರೆ, 238 ಗಂಟೆ ಮಾತನಾಡಿದ್ದ ಚೇತನ್​​ ಹಾಗೂ ಸಿಯಾ
ಐತಿಹಾಸಿಕ ಲೋಹ್​ಗಡ್​ ಕೋಟೆ ಬಳಿ ಟ್ರೆಕ್ಕಿಂಗ್​ಗೆ ತೆರಳಿದ್ದಾಗ ಕಾಲು ಜಾರಿ ಯುವ ಉದ್ಯಮಿ ಕೇತನ್​​ ಅಗರ್ವಾಲ್​​ ಮೃತಪಟ್ಟರು ಎನ್ನಲಾಗಿತ್ತು. ಆದರೆ, ಅನುಭವಿ ಟ್ರೆಕ್ಕರ್​ ಆದ ಮಗ ಅಷ್ಟು ಸುಲಭವಾಗಿ  ಬೀಳೋದು ಹೇಗೆ, ಭಾವಿ ಪತ್ನಿ ಸಿಯಾಳ ಹೇಳಿಕೆಗಳು ಕ್ಷಣಕ್ಕೊಮ್ಮೆ ಬದಲಾಗ್ತಿರೋದು ಯಾಕೆ ಎಂದು ಅನುಮಾನ ಕುಟಂಬಸ್ಥರಿಗೆ ವ್ಯಕ್ತವಾಯಿತು.ಇದೇ ಗೊಂದಲಗಳು ಕೊಲೆಯ ಸಂಚು ಬಯಲಾಗಲು ಕಾರಣವಾಗಿದ್ದು. 
ಜೂನ್​ 18ರಂದು ಸಿಯಾಗೋಯಲ್​ ಮತ್ತು  ಕೇತನ್​ ಟ್ರೆಕ್ಕಿಂಗ್​ಗೆ ತೆರಳಿದ್ದರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಜೋರಾದ ಗಾಳಿ ಬೀಸಿ ಅವರು ಕಂದಕಕ್ಕೆ ಬಿದ್ದು ಮೃತಪಟ್ಟರು ಎನ್ನಲಾಗಿತ್ತು. ಘಟನೆ ನಡೆದು ಮೂರ್ನಾಲ್ಕು ದಿನಗಳ ನಂತರ ಸಿಯಾ ಗೋಯೆಲ್​​​  ಭಾವಿ ಪತಿಯ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿದ್ದರು.

ಸಹೋದರಿ ಜೊತೆ ಮಾತುಕತೆ ಹುಟ್ಟಿಸಿತು ಅನುಮಾನ

ಸಿಯಾ ಮತ್ತು ಕೇತನ್​ ಮೂರು ಬಾರಿ ಮೇ 31, ಜೂನ್ 14 ಮತ್ತು ಜೂನ್ 18 ಲೋಹ್​ಗಡ್​ಗೆ ಟ್ರೆಕ್ಕಿಂಗ್​ಗೆ ತೆರಳಿದ್ದರು.  ಎರಡು ಬಾರಿ ಏನೂ ಆಗಲಿಲ್ಲ. ಆದರೆ ಈಗ ನಿಜಕ್ಕೂ ಏನಾಯ್ತು ಎಂದು  ಕೇತನ್​ನ ಸಹೋದರಿ ಕೇಳಿಕೊಂಡಿದ್ದರು. ಆಕೆ ಘಟನೆ ಬಗ್ಗೆ ವಿಶ್ಲೇಷಿಸಿದಳು. ಪ್ರಕರಣದಲ್ಲಿ ತನ್ನ  ಪಾತ್ರ ತಳಕು ಹಾಕಿಕೊಳ್ಳದಂತೆ ಕತೆಯನ್ನು ಸೃಷ್ಟಿಸಿ ಹೇಳಿಕೊಂಡು ಹೊರಟಳು.
ಸಿಯಾಳ ನಡವಳಿಕೆ, ಹೇಳಿಕೆಯ ಸೂಕ್ಷ್ಮವಾಗಿ ಗಮನಿಸಿ ಕೇತನ್​ ಸಹೋದರಿ ಏನೋ ಸರಿಯಿಲ್ಲ ಎಂದು ಪೋಷಕರಿಗೆ ಹೇಳಿದರು. ಆಗ ತಂದೆಗೂ ಅನುಮಾನ ವ್ಯಕ್ತವಾಯಿತು. ಆತ ಟ್ರೆಕ್ಕಿಂಗ್​ ಅನುಭವಿ ಅಷ್ಟು ಸುಲಭವಾಗಿ ಸಾಯೋಕೆ ಸಾಧ್ಯಾನೆ ಇಲ್ಲ ಎಂದು ಪೊಲೀಸರಿಗೆ ದೂರು ಕೊಟ್ಟರು. ಆಗಲೇ ಸಿಯಾಳ ಅಸಲಿ ಕತೆ ಬಯಲಾಗಿದ್ದು.
ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು ಸಿಸಿಟಿವಿ, ತಾಂತ್ರಿಕವಾಗಿ ತನಿಖೆ ನಡೆಸಿದಾಗ ಚೇತನ್​ ಹಾಗೂ ಸಿಯಾ ಮಧ್ಯೆ ಒಂದು ವರ್ಷದಿಂದ ಸಂಬಂಧವಿದ್ದಿದ್ದು ಬೆಳಕಿಗೆ ಬಂದಿದೆ. ಸಿಯಾ ಹಾಗೂ ಕೇತನ್​ ವಾಹನದ ಚಲನವಲನ. ಉರಿಬಿಸಿಲಲ್ಲೂ ಜಾಕೆಟ್​ ಧರಿಸಿದ್ದ ಬಗ್ಗೆ ಗಮನ ಸೆಳೆಯಿತು. ಇದು ಪೊಲೀಸರ ತನಿಖೆಗೆ ಮತ್ತಷ್ಟು ಪುಷ್ಠಿಯನ್ನು ನೀಡಿತ್ತು.

ಸಿಯಾ, ಚೇತನ್​ ಸಂಬಂಧದ ಬಗ್ಗೆ ಅವರಿಗೆ ಗೊತ್ತಿತ್ತು

ಸಿಯಾ ಮತ್ತು ಚೇತನ್​ ನಡುವಿನ ಸಂಬಂಧ ಆಕೆಯ ಪೋಷಕರಿಗೆ ತಿಳಿದಿತ್ತು. ಆದರೆ, ಬೇಕಂತಲೆ ನಮ್ಮ ಮಗನಿಗೆ ಕೊಟ್ಟು ಮದುವೆ ಮಾಡಲು ನೋಡಿದರು ಎಂದು ಕೇತನ್​ ಕುಟುಂಬ ಆರೋಪಿಸಿದೆ.

2004 ಕರೆ, 238 ಗಂಟೆ ಮಾತು

ಚೇತನ್ ಚೌಧರಿ ಹಾಗೂ ಸಿಯಾಳ ಫೋನ್​ ಕರೆ ವೀಕ್ಷಿಸಿದಾಗ ಇಬ್ಬರ ನಡುವೆ ಕಳೆದ ಆರು ತಿಂಗಳಲ್ಲಿ 2004 ಬಾರಿ ಕರೆ ಮಾಡಿದ್ದಾರೆ. ಒಟ್ಟು 238 ಗಂಟೆ ಮಾತಾನಾಡಿರುವುದು ಬೆಳಕಿಗೆ ಬಂದಿದೆ.ಈ ಸಂಭಾಷಣೆಯೂ ಕೊಲೆ ಮಾಡುವ ಸಲುವಾಗಿ ನಡೆಸಿದ ಕರೆಗಳು ಎನ್ನುವುದನ್ನು ಪೊಲೀಸರು ಶಂಕಿಸಿದ್ದಾರೆ.  ಸದ್ಯ ಸಿಯಾ ಮತ್ತು ಚೇತನ್​ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಜೂನ್​ 29ರವರೆಗೂ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. 
ಘಟನೆ ನಡೆದ ದಿನ ಸಿಯಾ ಬೆಳಿಗ್ಗೆ 7 ರಿಂದ ಸಂಜೆ 5:40ವರೆಗೂ ಮೊಬೈಲ್​ ಬಳಕೆ ಮಾಡಿರಲಿಲ್ಲ. ಚೇತನ್​ ಸಹ ಫೋನ್​ ಅನ್ನು ಅಂಗಡಿಯಲ್ಲೇ ಬಿಟ್ಟು, ತನ್ನ ಅಂಗಡಿಯವನೊಬ್ಬನ ಮೊಬೈಲ್​ನಲ್ಲಿ ಸಿಯಾಳಿಗೆ ಕರೆ ಮಾಡಿ ತೆರಳಿದ್ದ ಎನ್ನುವುದು ತಿಳಿದುಬಂದಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net