ಜೆನ್​ ಜಿ ಆಯ್ತು ಈಗ Alpha ಸರದಿ; KVS ಜೊತೆ ಪ್ರಾದೇಶಿಕ ಶಾಲೆಯ ವಿಲೀನ ವಿರೋಧಿಸಿ, ಭೋಪಾಲ್​ನಲ್ಲಿ ಸ್ಟೂಡೆಂಟ್ಸ್​ ಪ್ರೊಟೆಸ್ಟ್..Bhopal

Bhopal Regional School protest
Bhopal Regional School protest
Published on

ಪ್ರಮುಖ ಮುಖ್ಯಾಂಶಗಳು

  • ಡಿಎಂಎ ಯನ್ನು ಕೇಂದ್ರ ವಿದ್ಯಾಲಯ ಸಂಘಟನೆಗೆ ಸೇರಿಸುವ ಪ್ರಸ್ತಾವನೆ ವಿರುದ್ಧ ಭೋಪಾಲ್ ಸ್ಟೂಡೆಂಟ್ಸ್ ಕಿಡಿ
  • 'ಜೆನ್ ಆಲ್ಫಾ' ತಲೆಮಾರಿನ ತಲೆಮಾರಿನ ವಿದ್ಯಾರ್ಥಿಗಳಿಂದ ಶಾಲೆಯ ಹೊರಗೆ ಪ್ರತಿಭಟನೆ
  • ವೀಲಿನಗೊಳಿಸುವ ಸೂಚನೆ ವಾಪಸ್​ ಪಡೆಯದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ

Bhopal Regional School protest:

ಇತ್ತೀಚೆಗೆ ಜಂತರ್​ ಮಂತರ್​ನಲ್ಲಿ ಕಾಕ್ರೋಚ್​ ಜನತಾ ಪಾರ್ಟಿ(ಸಿಜೆಪಿ) ಸ್ಪರ್ಧಾತ್ಮಕ ಪರೀಕ್ಷೆಯಲ್ಲುಂಟಾಗಿದ್ದ ಲೋಪದೋಷಗಳ ವಿರುದ್ಧ ಪ್ರತಿಭಟನೆ ನಡಸಿ, ಇಡೀ ದೇಶದ ಗಮನ ಸೆಳೆದಿತ್ತು. ಸದ್ಯ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜೆನ್ ಆಲ್ಫಾ' ತಲೆಮಾರಿನ ಶಾಲಾ ಮಕ್ಕಳು ಸರ್ಕಾರದ ನಿರ್ಧಾರದ ವಿರುದ್ಧ ದನಿ ಎತ್ತಿ ನಡೆಸುತ್ತಿರುವ ಹೋರಾಟ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹೌದು, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಡೆಮಾನ್‌ಸ್ಟ್ರೇಷನ್ ಮಲ್ಟಿಪರ್ಪಸ್ ಸ್ಕೂಲ್ (ಡಿಎಂಎಸ್) ಅಥವಾ ರೀಜನಲ್ ಸ್ಕೂಲ್ ಅನ್ನು ಕೇಂದ್ರ ವಿದ್ಯಾಲಯ ಸಂಘಟನೆಯೊಂದಿಗೆ (ಕೆವಿಎಸ್) ವಿಲೀನಗೊಳಿಸುವ ಪ್ರಸ್ತಾವನೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ವೀಲಿನಗೊಳಿಸೋದು ಬೇಡ

ಶಾಲೆಯ ವಿಲೀನದಿಂದ ಸಂಸ್ಥೆಯು ಶೈಕ್ಷಣಿಕ ನಾವೀನ್ಯತೆಮತ್ತು ಪ್ರಯೋಗಗಳ ಮೂಲ ಉದ್ದೇಶವನ್ನು ಕಳೆದುಕೊಳ್ಳಲಿದೆ. ಹೀಗಾಗಿ, ಡಿಎಂಎಸ್ ಜೊತೆಗೆ ಕೆವಿಎಸ್ ವಿಲೀನಗೊಳಿಸುವುದು ಬೇಡ ಎಂದು ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ.

ಎಚ್ಚರಿಕೆ ಕೊಟ್ಟ ಸ್ಟೂಡೆಂಟ್ಸ್

ಪ್ರತಿಭಟನೆಯ ನಂತರ ವಿದ್ಯಾರ್ಥಿಗಳು ಪ್ರಾದೇಶಿಕ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್.ಕೆ. ಗುಪ್ತಾ ಅವರಿಗೆ ಮನವಿ ಸಲ್ಲಿಸಿ ತಮ್ಮ ವಿರೋಧ ಹಾಗೂ ಬೇಡಿಕೆಗಳನ್ನು ಅಧಿಕೃತವಾಗಿ ದಾಖಲಿಸಿದರು. ಡಿಎಂಎಸ್ ಜೊತೆಗೆ ಕೆವಿಎಸ್ ವಿಲೀನಗೊಳಿಸುವ ನಿರ್ಧಾರವನ್ನು ತಕ್ಷಣ ಹಿಂಪಡೆಯದಿದ್ದರೆ, ಶಾಂತಿಯುತ ಪ್ರತಿಭಟನೆಗಳನ್ನು ಹಂತ ಹಂತವಾಗಿ ತೀವ್ರಗೊಳಿಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
1965ರ ಡಿಸೆಂಬರ್‌ನಿಂದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಪ್ರಾಯೋಗಿಕ ಶಾಲೆಗಳು ಭೋಪಾಲ್ ಸೇರಿದಂತೆ ಅಜ್ಮೀರ್, ಮೈಸೂರು ಮತ್ತು ಭುವನೇಶ್ವರದಲ್ಲಿ ಸ್ಥಾಪಿಸಲ್ಪಟ್ಟಿವೆ, (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net