

ಮುಂಬೈನಲ್ಲಿ
ಗಣೇಶ ಚತುರ್ಥಿ ಅಂದ್ರೆ ಸಂಭ್ರಮಕ್ಕೆ ಎಲ್ಲೆಯೇ ಇರಲ್ಲ. ಹಬ್ಬಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗಲೇ ನಗರದ ಗಲ್ಲಿ ಗಲ್ಲಿಗಳಲ್ಲಿ ಗೌರಿಪುತ್ರನ ಆಗಮನ ಶುರುವಾಗಿದೆ. ಸಾರ್ವಜನಿಕ ಗಣಪತಿ ಮಂಡಳಿಗಳಲ್ಲೂ ಹಬ್ಬದ ತಯಾರಿ ಜೋರಾಗಿದ್ದು, ವಿಭಿನ್ನ ಥೀಮ್‌ಗಳು ಹಾಗೂ ಕಲಾತ್ಮಕ ಮೂರ್ತಿಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಿದೆ.
ಮುಂಬೈನ ಕೊಲಾಬಾ ಚಾ ಸಾಮ್ರಾಟ್ ಗಣಪತಿ ಮಂಡಳಿyu
ಪ್ರತಿ ವರ್ಷವೂ ತನ್ನದೇ ಆದ ವಿಶೇಷತೆಯಿಂದ ಗಮನ ಸೆಳೆಯುತ್ತದೆ. ಈ ಬಾರಿಯೂ ಮಂಡಳಿ ರುದ್ರಾಕ್ಷಿ ಮಣಿಗಳಿಂದ ಅಲಂಕರಿಸಿದ ವಿಶೇಷ ಗಣಪತಿ ಮೂರ್ತಿಯನ್ನು ಸಿದ್ಧಪಡಿಸಿದೆ. ಮೂರ್ತಿಯ ವಿಭಿನ್ನ ರೂಪ ಇದೀಗ ಸಾಮಾಜಿಕ ಜಾಲತಾಣದಲ್ಲೂ ಸದ್ದು ಮಾಡುತ್ತಿದೆ.https://www.instagram.com/reel/DctHdavtikb/?utm_source=ig_web_copy_link&igsi=MzRlODBiNWFlZA==