ಇಂಧನ ಬಿಕ್ಕಟ್ಟು; ತಮ್ಮ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿದ ಪ್ರಧಾನಿ ಮೋದಿ | PM Modi

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on
ನವದೆಹಲಿ: ಪೆಟ್ರೋಲ್, ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವಂತೆ ದೇಶದ ಜನರಿಗೆ ಕರೆ ನೀಡಿದ ಬಳಿಕ ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಅಧಿಕೃತ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆ ಕಡಿಮೆ ಮಾಡಿದ್ದು, ಅಗತ್ಯವಿದ್ದಲ್ಲಿ ಇವಿ ಕಾರ್​​ ಬಳಕೆಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಬುಧವಾರ(ಮೇ 13) ವರದಿಯಾಗಿದೆ.
ಮೇ 10ರಂದು ಹೈದರಾಬಾದ್‌ನಲ್ಲಿ ತಾವು ಮಾಡಿದ ಭಾಷಣದ ಬಳಿಕ ಪ್ರಧಾನಿಯವರು, ಗುಜರಾತ್ ಮತ್ತು ಅಸ್ಸಾಂ ಭೇಟಿಯ ಸಮಯದಲ್ಲಿ ಎಸ್‌ಪಿಜಿ ಶಿಷ್ಟಾಚಾರದಡಿಯಲ್ಲಿ ಕಡ್ಡಾಯವಾಗಿರುವ ಎಲ್ಲಾ ಪ್ರಮುಖ ಭದ್ರತಾ ವ್ಯವಸ್ಥೆಗಳನ್ನು ಉಳಿಸಿಕೊಂಡು, ಅನಗತ್ಯ ವಾಹನಗಳನ್ನು ಕಡಿತಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಹೊಸ ವಾಹನಗಳನ್ನು ಖರೀದಿಗಳನ್ನು ಮಾಡದೆ, ಸಾಧ್ಯವಾದಲ್ಲೆಲ್ಲಾ ವಿದ್ಯುತ್ ವಾಹನಗಳನ್ನು ತಮ್ಮ ಬೆಂಗಾವಲು ಪಡೆಯಲ್ಲಿ ಅಳವಡಿಸಿಕೊಳ್ಳುವಂತೆ ಮೋದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಮಧ್ಯೆ ಹೈದರಾಬಾದ್‌ನಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿ, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದು, ನಗರಗಳಲ್ಲಿ ಮೆಟ್ರೋ ರೈಲು ಬಳಸುವುದು, ಕಾರ್‌ಪೂಲಿಂಗ್, ವಿದ್ಯುತ್ ವಾಹನಗಳ ಬಳಕೆಯನ್ನು ಹೆಚ್ಚಿಸುವುದು, ಪಾರ್ಸೆಲ್ ಸಾಗಣೆಗೆ ರೈಲ್ವೆ ಸೇವೆಗಳನ್ನು ಬಳಸುವುದು ಮತ್ತು ವಿದೇಶಿ ವಿನಿಮಯವನ್ನು ಉಳಿಸಲು ಮನೆಯಿಂದಲೇ ಕೆಲಸ ಮಾಡುವಂತೆ ಸಲಹೆ ನೀಡಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net