ಗುರುಗ್ರಾಮ್: ಕಾರ್ಗಿಲ್ ಯುದ್ಧದಂತಹ ಭೀಕರ ಕದನದಲ್ಲಿ ಶತ್ರುಗಳ ಎದೆ ನಡುಗಿಸಿ, ಭಾರತೀಯ ವಾಯುಪಡೆಯ 'ಆಪರೇಷನ್ ಸಫೇದ್ ಸಾಗರ್' ಯಶಸ್ಸಿಗೆ ಕಾರಣರಾದ ನಿವೃತ್ತ ಗ್ರೂಪ್ ಕ್ಯಾಪ್ಟನ್ ಒಬ್ಬರ ಮೇಲೆ ಹಲ್ಲೆ ನಡೆದಿರುವ ದಾರುಣ ಘಟನೆ ವರದಿಯಾಗಿದೆ. ಪಾರ್ಕಿಂಗ್ ವಿಚಾರಕ್ಕೆ ಶುರುವಾದ ವಾಗ್ವಾದವು ವಿಕೋಪಕ್ಕೆ ಹೋಗಿ, ನಿವೃತ್ತ ಯೋಧನ ಕೈ ಮುರಿದು, ತಲೆಗೆ ಮಾರಕಾಸ್ತ್ರದಿಂದ ಹೊಡೆದಿರುವ ಹೇಯ ಕೃತ್ಯ ಗುರುಗ್ರಾಮ್ನಲ್ಲಿ ನಡೆದಿದೆ.