ದುರಸ್ತಿಗೀಡಾದ Kanpur-Lucknow Expressway; ರಸ್ತೆ ಮೇಲಿನ ನೀರು ಒಣಗಿಸಲು 10 ಟೇಬಲ್ ಫ್ಯಾನ್​ ಬಳಕೆ, ಎಂಥಾ ಮೂರ್ಖರು ಎಂದ ನೆಟ್ಟಿಗರು​

Kanpur-Lucknow Expressway
Kanpur-Lucknow Expressway
Published on

Kanpur-Lucknow Expressway:

ಜುಲೈನಲ್ಲಿ ಲೋಕಾರ್ಪಣೆಗೊಂಡಿದ್ದ ಉತ್ತರ ಪ್ರದೇಶದ ಲಖನೌ ಮತ್ತು ಕಾನ್ಪುರ್​​ ನಡುವಿನ ಹೆದ್ದಾರಿಯ ಮೇಲ್ಮೈ ಮಳೆಯಿಂದಾಗಿ ಕಿತ್ತುಬಂದಿತ್ತು. ರಸ್ತೆಯಲ್ಲಿ ನಿಂತಿದ್ದ ನೀರು ಒಣಗಿಸಿ, ದುರಸ್ತಿ ಕಾರ್ಯ ಮಾಡಲು ಟೇಬಲ್​ ಫ್ಯಾನ್​ ಬಳಸಿದ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ದೃಶ್ಯದಲ್ಲಿ ಏನಿದೆ?

ಹೆದ್ದಾರಿಯ ಒಂದು ಭಾಗದಲ್ಲಿ ರಸ್ತೆಯ ಮೇಲ್ಮೈ ಸಂಪೂರ್ಣ ಕಿತ್ತುಬಂದಿದೆ. ಇನ್ನು ಮಣ್ಣು, ಕಲ್ಲಿನಿಂದ ಕೂಡಿರುವ ಭಾಗದಲ್ಲಿ ಯಥೇಚ್ಛವಾಗಿ ನೀರು ತುಂಬಿದ್ದ ಕಾರಣ ಒಣಗಿಸಿ, ದುರಸ್ತಿ ಮಾಡಲು ಆಡಳಿತ ಮಂಡಲಿ ಟೇಬಲ್​ ಫ್ಯಾನ್​ಗಳನ್ನು ಬಳಕೆ ಮಾಡಿರುವುದು ದೃಶ್ಯದಲ್ಲಿ ಇದೆ.

ನೆಟ್ಟಿಗರು ಏನಂದ್ರು?

4,700 ಕೋಟಿ ವೆಚ್ಚ ಮಾಡಿ ಈ ಲಕ್ನೋ ಮತ್ತು ಕಾನ್ಪುರ ಎಕ್ಸ್​​ಪ್ರೆಸ್​ ವೇ ನಿರ್ಮಾಣ ಮಾಡಲಾಗಿದೆ. ಇದನ್ನು ಉದ್ಘಾಟಿಸಿ ಇನ್ನೂ 47 ದಿನವೂ ಕಳೆದಿಲ್ಲ. ಸುಮಾರು 40 ಸ್ಥಳದಲ್ಲಿ ಬಿರುಕು ಕಾಣಿಸಿಕೊಂಡಿದೆ. ಒಂದು ಹಾನಿಗೊಂಡ ಭಾಗದಲ್ಲಿ, ದುರಸ್ತಿ ಕೆಲಸದ ವೇಳೆ ಮಳೆನೀರನ್ನು ಒಣಗಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರ (NHAI) ಯಿಂದ ಫ್ಯಾನ್​ ಅಳವಡಿಸಿದ್ದಾರೆ. ನಿತಿನ್ ಗಡ್ಕರಿ ಅವರು ಈ “ತಂತ್ರಜ್ಞಾನ”ಕ್ಕೆ ತಕ್ಷಣವೇ ಪೇಟೆಂಟ್ ಅರ್ಜಿ ಸಲ್ಲಿಸಬೇಕು.ಇಂತಹ ಆವಿಷ್ಕಾರವನ್ನು ಭಾರತದಿಂದ ಹೊರಗೆ ಹೋಗಲು ಎಂದಿಗೂ ಅನುಮತಿಸಬಾರದು ಎಂದು ಲೇವಡಿ ಮಾಡಿದ್ದಾರೆ.

ನೋಟಿಸ್​ ಜಾರಿ


ರಸ್ತೆ ನಿರ್ಮಾಣದಲ್ಲಿ ಉಂಟಾದ ಲೋಪದೋಷದಿಂದಾಗಿ ಸದ್ಯ ನಿರ್ಮಾಣ ಸಂಸ್ಥೆ ಪಿಎನ್‌ಸಿ ಇನ್ಫ್ರಾಟೆಕ್‌ಗೆ ನೋಟಿಸ್​ ಜಾರಿ ಮಾಡಲಾಗಿದೆ. ಮೂರು ಕೋಟಿ ದುರಸ್ತಿ ವೆಚ್ಚವನ್ನು ಕಂಪನಿ ಭರಿಸಲಿದೆ ಎಂದು ಹೇಳಲಾಗಿದ್ದು, ಯೋಜನೆಯ ಮೇಲ್ವಿಚಾರಣೆಗೆ ನಿಗದಿ ಪಡಿಸಲಾಗಿದ್ದ ಅಧಿಕಾರಿಗಳನ್ನು 2 ವರ್ಷಗಳ ಕಾಲ NHAI ಮತ್ತು ಸಂಬಂಧಿತ ಸಚಿವಾಲಯದ ಯೋಜನೆಗಳಲ್ಲಿ ಭಾಗವಹಿಸದಂತೆ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ. ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೂ ಟೋಲ್​ ಸಂಗ್ರಹ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ದುರಸ್ತಿಗೆ ಕಾರಣ ಏನು ಎಂದು ಐಐಟಿ ಖರಗ್​ಪುರ ಪ್ರಧ್ಯಾಪಕ ಕೆಎಸ್​ ರೆಡ್ಡಿ ನೇತೃತ್ವದ ತಜ್ಞರ ತಂಡವನ್ನು ತನಿಖೆ ನಡೆಸಲು ನೇಮಕ ಮಾಡಲಾಗಿದೆ ಎಂದು

NHAI ತಿಳಿಸಿದೆ.

(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net