ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಅನುಮತಿ ಪಡೆಯದೆ ರೋಡ್​ ಶೋ ನಡೆಸಿದ ದಳಪತಿ; ವಿಜಯ್​ ಮೇಲೆ ಕೇಸ್​ ದಾಖಲು! Thalapathy Vijay

ಅನುಮತಿ ಪಡೆಯದೆ ರೋಡ್​ ಶೋ ನಡೆಸಿದ ದಳಪತಿ ವಿಜಯ್​
ಅನುಮತಿ ಪಡೆಯದೆ ರೋಡ್​ ಶೋ ನಡೆಸಿದ ದಳಪತಿ ವಿಜಯ್​
Published on

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್​ 23 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ
  • ಅನುಮತಿ ಪಡೆಯದೆ ರೋಡ್​ ಶೋ ನಡೆಸಿದ ದಳಪತಿ ವಿಜಯ್​
  • ಟಿವಿಕೆ ಪಕ್ಷದ ಮುಖ್ಯಸ್ಥ ಜೋಸೆಫ್​ ವಿಜಯ್​ ಮೇಲೆ ಪ್ರಕರಣ ದಾಖಲು
ಚೆನ್ನೈ: ಇನ್ನೇನು ಕೆಲವೇ ದಿನಗಳಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನಟ, ರಾಜಕಾರಣಿ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ (Thalapathy Vijay)​ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. ಆದರೆ ಚೆನ್ನೈನಲ್ಲಿ ಅನುಮತಿ ಪಡೆಯದೆ ರೋಡ್​ ಶೋ ನಡೆಸಿದ ಹಿನ್ನಲೆಯಲ್ಲಿ ವಿಜಯ್​ ಮೇಲೆ ಪ್ರಕರಣ ದಾಖಲಾಗಿದೆ.

ಅನಧಿಕೃತ ರೋಡ್​ ಶೋ

ಗುರುವಾರ (ಏ.16) ಚೆನ್ನೈ ಪಟ್ಟಣದ ಮೆಂಬ್ಲಮ್​ ಪೊಲೀಸ್​ ಠಾಣೆಯಲ್ಲಿ ವಿಜಯ್​, ಬುಸ್ಸಿ ಆನಂದ್​ ಮತ್ತು ಅಪ್ಪನ್ನು ಎಂಬುವವರ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಪೊಲೀಸರಿಂದ ಅನುಮತಿ ಪಡೆಯದೆ, ರೋಡ್​ ಶೋ ನಡೆಸಲು ವಿಜಯ್​ ಮುಂದಾಗಿದ್ದಾರೆ. ಆ ವೇಳೆ ಪೊಲೀಸರು ಇದನ್ನು ತಡೆಯಲು ಮುಂದಾದಾಗ ಸಾವಿರಾರು ಜನ ಸೇರಿದ್ದರಿಂದ ನಟ ವಿಜಯ್​ ಪೊಲೀಸರ ಮಾತನ್ನು ಕೇಳಿಸಿಕೊಳ್ಳದೆ ರೋಡ್​ ಶೋ ನಡೆಸಿದ್ದಾರೆ. ಆದ್ದರಿಂದ ಪೊಲೀಸರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಧಾರದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಮಿಳುನಾಡು ಚುನಾವಣೆ

ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್​ 23 ರಂದು ಚುನಾವಣೆ ನಡೆಯಲಿದ್ದು, ಇದರ ಫಲಿತಾಂಶವು ಮೇ 4 ರಂದು ಹೊರ ಬೀಳಲಿದೆ.
ಈ ಭಾರಿಯ ಚುನಾವಣೆಯಲ್ಲಿ ಆಡಳಿತರೂಢ ಡಿಎಂಕೆ ಪಕ್ಷವು ಕಾಂಗ್ರೆಸ್​ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೆ, ಬಿಜೆಪಿ ಎಐಎಡಿಎಂಕೆ ಪಕ್ಷದೊಟ್ಟಿಗೆ ಈ ಭಾರಿ ಚುನಾವಣೆಯನ್ನು ಎದುರಿಸಲಿದೆ. ಚೊಚ್ಚಲ ಭಾರಿಗೆ ಚುನಾವಣೆಗೆ ಇಳಿದಿರುವ ತಮಿಳಿಗ ವೆಟ್ರಿಗ ಕಳಗಂ(ಟಿವಿಕೆ) ಪಕ್ಷ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸಲಿದೆ. ಈ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್​ ಪೆರಂಬೂರು ಹಾಗೂ ತಿರುಚ್ಚಿ(ಪೂರ್ವ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net