2003 ರ 91ನೇ ಸಂವಿಧಾನ ತಿದ್ದುಪಡಿಯ ಪ್ರಕಾರ, ಸಂವಿಧಾನದ 10ನೇ ವೇಳಾಪಟ್ಟಿಯಿಂದ (ಪಕ್ಷಾಂತರ ನಿರೋಧಕ ಕಾಯ್ದೆ) ‘ಪಕ್ಷ ಸೀಳಿಕೆ ಎಂಬ ರಕ್ಷಣೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದರರ್ಥ, ರಾಜಕೀಯ ಪಕ್ಷವೊಂದು ಎರಡು ಸ್ಪರ್ಧಾತ್ಮಕ ಗುಂಪುಗಳಾಗಿ ಒಡೆಯುವುದನ್ನು ದೇಶದ ಕಾನೂನು ಒಪ್ಪುವುದಿಲ್ಲ. ಎರಡು ಬಣಗಳು ತಾವೇ ಅಸಲಿ ಪಕ್ಷ ಎಂದು ವಾದಿಸಿದಾಗ, ಸ್ಪೀಕರ್ ಆದವರು ಯಾರು ಅಸಲಿ ರಾಜಕೀಯ ಪಕ್ಷ ಎಂಬುದನ್ನು ಮಾತ್ರ ನಿರ್ಧರಿಸಬೇಕೇ ಹೊರತು, ರೆಬೆಲ್ ಬಣಕ್ಕೆ ಪ್ರತ್ಯೇಕ ಮಾನ್ಯತೆ ಅಥವಾ ಸವಲತ್ತುಗಳನ್ನು ನೀಡುವಂತಿಲ್ಲ. ಶಾಸಕಾಂಗ ಪಕ್ಷಕ್ಕಿಂತ ಮೂಲ ರಾಜಕೀಯ ಪಕ್ಷವೇ ಸರ್ವೋಚ್ಚ ಎಂದು ಅಭಿಷೇಕ್ ಸುಪ್ರೀಂಕೋರ್ಟ್ ತೀರ್ಪನ್ನು ನೆನಪಿಸಿದ್ದಾರೆ.