"ನಿನ್ನ ಗಂಡನಿಗೆ ಕಿಡ್ನಿ ದಾನ ಮಾಡು ಇಲ್ಲ 30 ಲಕ್ಷ ಕೊಡು"; ಅತ್ತೆ ಡಿಮ್ಯಾಂಡ್​ಗೆ ಸೊಸೆ ಶಾಕ್, ಮುಂದಾಗಿದ್ದೇನು?..Kanpur Dowry

Dowry Harassment Kanpur
Dowry Harassment Kanpur
Published on
ಕಾನ್ಪುರ: ವರದಕ್ಷಿಣೆ ಕೇಳುವುದು ಮತ್ತು ಕೊಡುವುದು. ತೆಗೆದುಕೊಳ್ಳುವುದು ಭಾರತದಲ್ಲಿ ನಿಷೇಧ. ವರದಕ್ಷಿಣೆ ನಿಷೇಧ ಕಾಯ್ದೆ 1961 ಅಡಿಯಲ್ಲಿ ತೀವ್ರ ಅಪರಾಧ. ಹೀಗಿದ್ದರೂ ಸಹ ಇಲ್ಲಿ ಡೌರಿ ಕೇಸ್​ನಿಂದ ಕೊಲೆ, ವಿಚ್ಛೇದನ ಕಿರುಕುಳದಂತಹ ಘಟನೆಗಳು ಮಾತ್ರ ನಿಲ್ತಾನೆ ಇಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ ಕಾನ್ಪುರದಲ್ಲಿ ನಡೆದ ಘಟನೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಆತನ ತಂದೆ-ತಾಯಿ ವಿರುದ್ಧ  ಮಾನಸಿಕ ಕಿರುಕುಳ ಹಾಗೂ ವರದಕ್ಷಿಣೆ ಕೇಳಿದ ಬಗ್ಗೆ ದೂರು ನೀಡಿದ್ದಾರೆ. ಆಕೆಯ ಗಂಡನ ಕುಟುಂಬಸ್ಥರ ವಿರುದ್ಧ ಚಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಡೆದಿದ್ದೇನು?

ಜೂನ್ 22, 2023 ರಂದು ಲಕ್ನೋದ ನಿಶಾಂತ್ ಕುಮಾರ್ ಅವರನ್ನು ಅದ್ದೂರಿಯಾಗಿಕಾನ್ಪುರದಲ್ಲಿ  ಮಹಿಳೆ ಮದುವೆಯಾದರು. ಪತಿಗೆ ಉಡುಗೊರೆಯಾಗಿ ಚಿನ್ನಾಭರಣ, 8 ಲಕ್ಷ ರೂಪಾಯಿ ನಗದು ಮತ್ತು ಮಹೀಂದ್ರಾ ಥಾರ್ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು.  ಆದರೆ ಲಕ್ನೋದಲ್ಲಿರುವ ಪತಿಯ ಮನೆಗೆ ಹೋದ ನಂತರ ತನಗೆ ವಿಚಿತ್ರ ಪರಿಸ್ಥಿತಿಗಳು ಎದುರಾದವು. ನನ್ನ  ಪತಿ ಪ್ರತಿ ಬಾರಿಯು ಲೈಂಗಿಕ ಸಂಬಂಧದಲ್ಲಿ ಯಾವುದೇ ಆಸಕ್ತಿ ತೋರಿಸುತ್ತಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
 ಮದುವೆಯಾದ ನಂತರ ಆತ ದಿನಕ್ಕೆ 10 ಮಾತ್ರ ತೆಗೆದುಕೊಳ್ಳುತ್ತಿದ್ದೆ. ನಾನು ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅವನಿಗೆ ರಕ್ತದೊತ್ತಡ ಇದೆ ಹಾಗಾಗಿ ಎಂದು ಸುಳ್ಳು ಹೇಳಿದ್ದರು. ಅಂತಿಮವಾಗಿ ತನ್ನ ಪತಿಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿರುವುದು ಮತ್ತು ಈ ವಿಷಯ ಆತನ ಕುಟುಂಬದವರಿಗೂ ತಿಳಿದಿರುವುದು ತಿಳಿಯಿತು. ಈ ವಿಚಾರ ಒಂದುಕಡೆಯಾದರೆ

ದೈಹಿಕ ಸಂಪರ್ಕದ ಬಗ್ಗೆ ಮಾತೇ ಆಡ್ತಿರಲಿಲ್ಲ

ಮತ್ತೊಂದು, ಕೆಲವೊಮ್ಮೆ ನಮ್ಮ ನಡುವೆ ನನ್ನ ಅತ್ತೆ ಬಂದು ಮಲಗುತ್ತಿದ್ದರು. ಮಾವ ರೂಮಿನೊಳಗೆ ನನ್ನ ಅನುಮತಿ ಪಡೆಯದೇ ನುಗ್ಗುತ್ತಿದ್ದರು. ಹೇಳದೆ ಕೇಳದೆ ಫೋಟೋ ತೆಗೆದುಕೊಳ್ಳುತ್ತಿದ್ದರು. ಲೈಂಗಿಕತೆ ಬಗ್ಗೆ ಮಾತನಾಡಿದರೆ ಬೇರೆಯವರನ್ನು ಮದುವೆಯಾಗಿ ಬಿಡು ಎಂದು ಹೇಳುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ನನ್ನ ಕುಟುಂಬಕ್ಕೆ ಮಾಹಿತಿ ಕೊಟ್ಟೆ

ನನ್ನ ಕುಟುಂಬಕ್ಕೆ ಈ ವಿಚಾರವನ್ನು ತಿಳಿಸಿದಾಗ ಅವರು ಮಧ್ಯಪ್ರವೇಶಿಸಿದರು. ಅದಾದ ಕೆಲವು ದಿನಕ್ಕೆ ನನ್ನೊಂದಿಗೆ ಚೆನ್ನಾಗಿದ್ದರು. ಆದರೆ, ಯಾವಾಗಲು ಫೈಲ್​ ಮುಚ್ಚಿಡು ಎನ್ನುತ್ತಿದ್ದರು.  ಒಮ್ಮೆ ಅದನ್ನು ಕಂಡಾಗ ಶಾಕಿಂಗ್​ ವಿಚಾರ ಬಯಲಾಗಿತ್ತು. ಅದು 2022ರ ವೈದ್ಯಕೀಯ ಫೈಲ್​ಗಳು ಅದು ನನ್ನಗಂಡನದು. ಆತನಿಗೆ ಕಿಡ್ನಿ ಫೇಲ್​ ಆಗಿರೋದು ತಿಳಿದು ಬಂದಿತು.
ಈ ಬಗ್ಗೆ  ಅತ್ತೆಯನ್ನು ವಿಚಾರಿಸಿದ ದಿನದಿಂದ ಕಿಡ್ನಿಯನ್ನು ದಾನ ಮಾಡುವಂತೆ ಅಥವಾ 30 ಲಕ್ಷ ರೂಪಾಯಿ ಹಣವನ್ನು ತರುವಂತೆ ಅವರು ಒತ್ತಡ ಹೇರಲಾರಂಭಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 2024ಅಕ್ಟೋಬರ್ 11ರಂದು ಅಲ್ಲಿಂದ ತವರಿಗೆ ಬಂದೆ ಅವರ ಬಳಿ ನಾವು ಕೊಟ್ಟ ಉಡುಗೊರೆಯಿದೆ ಅದು ವಾಪಸ್​ ನಮಗೆ ನೀಡಬೇಕು ಎಂದು ಬೇಡಿಕೆಯನ್ನಿಟ್ಟಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net