ಒಬ್ಬ ಇಪಿಎಫ್ ಸದಸ್ಯನಿಗೆ 12 ಅಂಕಿಯ ಯುಎಎನ್ ಕೊಡಲಾಗುತ್ತದೆ. ಈ ಸಂಖ್ಯೆಯ ಮೂಲಕ, ವಿವಿಧ ಉದ್ಯೋಗಗಳಿಗೆ ಸಂಬಂಧಿಸಿದ ಪಿಎಫ್ ಸದಸ್ಯರ ಐಡಿಗಳನ್ನು ಒಂದೇ ಖಾತೆಗೆ ಲಿಂಕ್ ಮಾಡಬಹುದು. ಸಾಮಾನ್ಯವಾಗಿ, ಉದ್ಯೋಗಿ ಪ್ರತಿ ಬಾರಿ ಉದ್ಯೋಗ ಬದಲಾಯಿಸಿದಾಗ ಹೊಸದಾಗಿ ಯುಎಎನ್ ಪಡೆಯುವ ಅಗತ್ಯವಿಲ್ಲ. ಪ್ರಸ್ತುತ UAN ಅನ್ನು ಹೊಸ ಸಂಸ್ಥೆಗೆ ಒದಗಿಸಿದರೆ, ಪಿಎಫ್ ಸೇವಾ ದಾಖಲೆಯನ್ನು ಅದರಲ್ಲೇ ಮುಂದುವರಿಸಬಹುದು.