ತಮಿಳುನಾಡು ವಿಧಾನಸಭೆ ಚುನಾವಣೆಗೆ ಏ. 23ರಂದು ಒಂದೇ ಹಂತದಲ್ಲಿ 234 ಸ್ಥಾನಗಳಿಗೆ ಮತದಾನ ನಡೆದಿದ್ದು, ನಾಳೆ ಫಲಿತಾಂಶ ಪ್ರಕಟವಾಗಲಿದೆ. ಹಲವು ಎಕ್ಸಿಟ್ ಪೋಲ್ ಪ್ರಕಾರ, ಮತ್ತೆ ಡಿಎಂಕೆ ಮೈತ್ರಿಕೂಟ ಗೆಲ್ಲುವ ಮುನ್ಸೂಚನೆ ನೀಡಿದ್ರೆ, ಕೆಲವು ಎಕ್ಸಿಟ್ ಪೋಲ್ಗಳು ಎಐಎಡಿಎಂಕೆ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿವೆ. ಅದರ ನಡುವೆ ಆಕ್ಸಿಸ್ ಮೈ ಇಂಡಿಯಾ ದಳಪತಿ ವಿಜಯ್ ನೇತೃತ್ವದ ಟಿವಿಕೆ ಮಿರಾಕಲ್ ಸೃಷ್ಟಿಸಲಿದೆ ಎಂದು ಭವಿಷ್ಯ ನುಡಿದಿವೆ (ಏಜೆನ್ಸೀಸ್).