'ವಿಳಂಬವಿಲ್ಲದೆ ನೂತನ ಸರ್ಕಾರ ರಚನೆಗೆ ಕ್ರಮ ಕೈಗೊಳ್ಳಿ'; ರಾಜ್ಯಪಾಲರಿಗೆ ಎಂಕೆ ಸ್ಟಾಲಿನ್​ರಿಂದ ಆಗ್ರಹ..MK Stalin

MK Stalin
MK Stalin
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರ ರಚನೆ ಮಾಡುವಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಿ ಎಂದು ಡಿಎಂಕೆ
  • ಪ್ರಜಾಪ್ರಭುತ್ವದ ಕರ್ತವ್ಯ ನೆನಪು ಮಾಡಿದ ಮಾಜಿ ಸಿಎಂ ಎಂಕೆ ಸ್ಟಾಲಿನ್
  • ರಾಜ್ಯಪಾಲರಿಗೆ ಸಂವಿಧಾನದದ ಮುಖ್ಯ ಅಂಶಗಳನ್ನು ನೆನಪು ಮಾಡಿದ ಎಂಕೆ ಸ್ಟಾಲಿನ್
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಣೆಗೊಂಡಿದ್ದು, ಚುನಾವಣಾ ಆಯೋಗವು ಜನರಿಂದ ಆಯ್ಕೆಯಾದ ಸದಸ್ಯರ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ. ಅಸ್ತಿತ್ವದಲ್ಲಿದ್ದ ವಿಧಾನಸಭೆ ಈಗ ವಿಸರ್ಜಿಸಿದೆ. ಈ ಬಗ್ಗೆ ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಚುನಾಯಿತ ಸದಸ್ಯರು ಈಗ ಪ್ರಮಾಣವಚನ ಸ್ವೀಕರಿಸುವ ಸಮಯ. ಹೀಗಾಗಿ ಹೊಸ ಸರ್ಕಾರ ರಚಿಸಲು ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು. ಜನಪರ ಕಾರ್ಯಗಳು ವಿಳಂಬವಿಲ್ಲದೆ ಪುನಾರಂಭವಾಗಬೇಕು ಎಂದು ಡಿಎಂಕೆ ನಾಯಕ ಸ್ಟಾಲಿನ್​ ಎಕ್ಸ್​ನಲ್ಲಿ ಟ್ವೀಟ್ ಮಾಡಿದ್ದಾರೆ.
ತಮಿಳಿಗ ವೆಟ್ರಿ ಕಳಗಂನ ಸಂಸ್ಥಾಪಕ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿರುವ ಆಂತರಿಕ ಬಿಕ್ಕಟ್ಟಿನ ಬಗ್ಗೆ ಎಂಕೆ ಸ್ಟಾಲಿನ್​ ಅವರು ನೇರವಾಗಿ ಮಾತನಾಡಿದ್ದಾರೆ. ಸರ್ಕಾರ ರಚನೆಯಲ್ಲಿ ಆಗುತ್ತಿರುವ ವಿಳಂಬವನ್ನು ರಾಜ್ಯಪಾಲರು ತಪ್ಪಿಸಬೇಕು ಎಂದು ಉಲ್ಲೇಖಿಸಿದ್ದಾರೆ.
ಸ್ಟಾಲಿನ್​ ಟ್ವೀಟ್​ನಲ್ಲಿ ಏನಿದೆ?
'ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿದೆ. ಚುನಾವಣಾ ಆಯೋಗವು ಜನರಿಂದ ಆಯ್ಕೆಯಾದ ವಿಧಾನಸಭೆಯ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಸ್ತಿತ್ವದಲ್ಲಿರುವ ವಿಧಾನಸಭೆಯನ್ನು ಈಗಾಗಲೇ ವಿಸರ್ಜಿಸಲಾಗಿದೆ. ಆ ಬಗ್ಗೆ ರಾಜ್ಯಪಾಲರು ಉಲ್ಲೇಖಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಮುಂದುವರೆದು, ಇಂತಹ ಪರಿಸ್ಥಿತಿಯಲ್ಲಿ, ವಿಧಾನಸಭೆಯ ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕರಿಸಿ, ಸರ್ಕಾರ ರಚನೆ ಮಾಡಿ..ಮತ್ತೆ ರಾಜ್ಯದ ಜನಪರ ಕಾರ್ಯವನ್ನು ತಡಮಾಡದೆ ಆರಂಭಿಸಬೇಕು. ಇದು ಪ್ರಜಾಪ್ರಭುತ್ವದ ಪ್ರಮುಖ ಕರ್ತವ್ಯ.
'ಈ ಸಂದರ್ಭದಲ್ಲಿ, ಸರ್ಕಾರ ರಚನೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಿ, ಸಂವಿಧಾಕ್ಕೆ ಅನುಗುಣವಾಗಿ ಹೊಸ ಸರ್ಕಾರ ರಚಿಸಲು ರಾಜ್ಯಪಾಲರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ದ್ರಾವಿಡ ಮುನ್ನೇತ್ರ ಕಳಗಂ ಪರವಾಗಿ ನಾನು ವಿನಂತಿಸುತ್ತೇನೆ' ಎಂದು ಎಂಕೆ ಸ್ಟಾಲಿನ್​ ಟ್ವೀಟ್ ಮಾಡಿದ್ದಾರೆ.

ಏನಿದು ಗೊಂದಲ?

ಏಪ್ರಿಲ್ 23 ಮತ್ತು 29ರಂದು 234 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.118 ಸ್ಥಾನಗಳು ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್​ ನಂಬರ್​ ಆದರೆ, ಟಿವಿಕೆಯ ನಾಯಕಕರು ಮೊದಲ ಬಾರಿ ಚುನಾವಣೆಗೆ ನಿಂತರು 108 ಕ್ಷೇತ್ರದಲ್ಲಿ ಭರ್ಜರಿ ಜಯ ಕಂಡಿದ್ದರು. ಆದರೆ, ಸರ್ಕಾರ ರಚಿಸುವಷ್ಟು ಸದಸ್ಯರಿಲ್ಲದ ಕಾರಣ ನಾಲ್ಕು ದಿನವಾದರೂ ಟಿವಿಕೆ ಇತರ ಪಕ್ಷಗಳ ಬೆಂಬಲಕ್ಕಾಗಿ ಹೆಣಗಾಡುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net