ನವದೆಹಲಿ: ಜೂನ್ 8 ರಂದು ನವದೆಹಲಿಯಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಮೈತ್ರಿಕೂಟದ ಸಭೆಯನ್ನು ಡಿಎಂಕೆ ಬಹಿಷ್ಕರಿಸುವುದಾಗಿ ಗುರುವಾರ ಘೋಷಣೆ ಮಾಡಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ(BJP), ಇಂಡಿಯಾ ಮೈತ್ರಿಕೂಟ ಸತ್ತು ಸಮಾಧಿಯಾಗಿದ್ದು, ಅದು ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದೆ ಎಂದು ವ್ಯಂಗ್ಯವಾಡಿದೆ.