ಸ್ನೇಹಿತರ ನಡುವೆ ಭಿನ್ನಾಭಿಪ್ರಾಯ ಸಹಜ; ಭಾರತಕ್ಕಿಂತ ಮುಖ್ಯವಾದ ಪಾಲುದಾರ ಇನ್ನೊಂದಿಲ್ಲ: ಯುಎಸ್​ ರಾಯಭಾರಿ ಸೆರ್ಗಿಯೊ ಗೋರ್ | Sergio Gore

ಭಾರತದಲ್ಲಿನ ನೂತನ ಅಮೆರಿಕ ರಾಯಭಾರಿಯಾಗಿ ಸೆರ್ಗಿಯೋ ಗೋರ್ ಅಧಿಕಾರ ವಹಿಸಿಕೊಂಡರು
ಭಾರತದಲ್ಲಿನ ನೂತನ ಅಮೆರಿಕ ರಾಯಭಾರಿಯಾಗಿ ಸೆರ್ಗಿಯೋ ಗೋರ್ ಅಧಿಕಾರ ವಹಿಸಿಕೊಂಡರು
Published on
ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಮುನ್ನುಡಿ ಬರೆಯಲು ಸಿದ್ದವಾಗಿರುವ ಸೆರ್ಗಿಯೋ ಗೋರ್(Sergio Gore) ಸೋಮವಾರ (ಜ.12) ಭಾರತದಲ್ಲಿನ ಅಮೆರಿಕದ ರಾಯಭಾರಿಯಾಗಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಬಗ್ಗೆ ರಾಯಭಾರ ಕಚೇರಿಯ ಸಿಬ್ಬಂದಿ ಮತ್ತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಗೋರ್, ಯುಎಸ್​ ಮತ್ತು ಭಾರತ ನಡುವಿನ ಬಾಂಧವ್ಯವನ್ನು ಈ ಶತಮಾನದ ಅತ್ಯಂತ ಪರಿಣಾಮಕಾರಿ ಜಾಗತಿಕ ವ್ಯಾಪಾರ ಪಾಲುದಾರಿಕೆ ಆಗುವುದು ಎಂದು ಬಣ್ಣಿಸಿದ್ದಾರೆ.
ಮುಂದುವರೆದು ಮಾತನಾಡಿರು ಗೋರ್, ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತವು ವ್ಯಾಪಾರ ಹಿತಾಸಕ್ತಿಗಳಿಂದ ಮಾತ್ರವಲ್ಲ, ಉನ್ನತ ಮಟ್ಟದಲ್ಲಿ ಆಧಾರವಾಗಿರುವ ಸಂಬಂಧದಿಂದ ಕೂಡಿದೆ. ಅಲ್ಲದೆ, ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ವೈಯಕ್ತಿಕ ಸ್ನೇಹವು ಮೈತ್ರಿಕೂಟದ ಮೂಲಾಧಾರವಾಗಿ ಉಳಿದಿದೆ ಎಂದು ತಿಳಿಸಿದ್ದಾರೆ.
ಯುಎಸ್​ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತರಾದ ಗೋರ್ ಒಂದು ನಿರ್ಣಾಯಕ ಕ್ಷಣದಲ್ಲಿ ಭಾರತಕ್ಕೆ ಆಗಮಿಸಿದ್ದು. ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಸುಂಕಗಳು ಮತ್ತು ರಷ್ಯಾದ ತೈಲ ಆಮದಿಗೆ ಸಂಬಂಧಿಸಿದ ಇತ್ತೀಚಿನ ದಿನಗಳಲ್ಲಿ ಘರ್ಷಣೆ ಭುಗಿಲೆದ್ದಿದೆ.

ಅಮೆರಿಕದ ಕಾರ್ಯತಂತ್ರದ ಪ್ರಕಟಣೆಗಳು

ರಾಯಭಾರಿಯ ಮೊದಲ ದಿನವು ತಾಂತ್ರಿಕ ಮತ್ತು ಆರ್ಥಿಕ ಏಕೀಕರಣವನ್ನು ಆಳಗೊಳಿಸುವ ಗುರಿಯನ್ನು ಹೊಂದಿರುವ ಮಹತ್ವದ ಹೊಸ ನೀತಿಗಳನ್ನು ಗುರುತಿಸಿದೆ.
ಪ್ಯಾಕ್ಸ್ ಸಿಲಿಕಾ ಆಹ್ವಾನ ಸೆಮಿಕಂಡಕ್ಟರ್‌ಗಳು, ನಿರ್ಣಾಯಕ ಖನಿಜಗಳು ಮತ್ತು AI ಗಾಗಿ ಸುರಕ್ಷಿತ ಜಾಗತಿಕ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ವಿನ್ಯಾಸಗೊಳಿಸಲಾದ ಯುಎಸ್ ನೇತೃತ್ವದ ಕಾರ್ಯತಂತ್ರದ ಉಪಕ್ರಮವಾದ ಪ್ಯಾಕ್ಸ್ ಸಿಲಿಕಾಗೆ ಸೇರಲು ಭಾರತವನ್ನು ಮುಂದಿನ ತಿಂಗಳು ಆಹ್ವಾನಿಸಲಾಗುವುದು ಎಂದು ಗೋರ್ ಘೋಷಿಸಿದರು. ಅಲ್ಲದೆ, ಬಹುನಿರೀಕ್ಷಿತ ವ್ಯಾಪಾರ ಒಪ್ಪಂದವನ್ನು ಮುನ್ನಡೆಸಲು ಎರಡೂ ರಾಷ್ಟ್ರಗಳ ಸಮಾಲೋಚಕರು ಮಂಗಳವಾರ ನಿರ್ಣಾಯಕ ಸಭೆಯನ್ನು ನಡೆಸಲಿದ್ದಾರೆ.
ಅರ್ಥಶಾಸ್ತ್ರದ ಹೊರತಾಗಿ, ಭದ್ರತೆ, ಭಯೋತ್ಪಾದನೆ ನಿಗ್ರಹ, ಇಂಧನ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವುದಾಗಿ ಗೋರ್ ಹೇಳಿದ್ದು. ಈ ಹಿಂದೆ ಶ್ವೇತಭವನದ ಸಿಬ್ಬಂದಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಗೋರ್, ಎರಿಕ್ ಗಾರ್ಸೆಟ್ಟಿಯವರ ಸ್ಥಾನವನ್ನು ಅಲಂಕರಿಸಿದ್ದಾರೆ. ಅಲ್ಲದೆ, ನಿಜವಾದ ಸ್ನೇಹಿತರು ಭಿನ್ನಾಭಿಪ್ರಾಯ ಇರಬಹುದು. ಆದರೆ ಯಾವಾಗಲೂ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬಹುದು ಎಂದು ಗೋರ್​ ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net