ಬಳಿಕ ಸೇನಾ ಪಡೆಗಳ ಚಲನವಲನ, ನಿಯೋಜನೆ, ಫೋಟೋ ಮತ್ತು ವೀಡಿಯೊ ಸೇರಿ ಸೂಕ್ಷ್ಮ ದತ್ತಾಂಶಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಮಹಿಳೆ ಅಧಿಕಾರಿಯಿಂದ ವರ್ಗಾಯಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಮತ್ತೊಬ್ಬ ಸಹೋದ್ಯೋಗಿಯ ಮೊಬೈಲ್ ಫೋನ್‌ನಲ್ಲಿ ನಿರ್ದಿಷ್ಟ ಅಪ್ಲಿಕೇಶನ್ ಒಂದನ್ನು ಇನ್‌ಸ್ಟಾಲ್ ಮಾಡಲು ಸೂಚಿಸಿದ್ದಾಳೆ.