ಜರ್ಮನಿಯ ಸ್ಟೇಡ್ ಪಟ್ಟಣದಲ್ಲಿ ಭೀಕರ ಗುಂಡಿನ ದಾಳಿ: ಐವರು ಸಾವು: ಇಬ್ಬರು ಶಂಕಿತರ ಬಂಧನ | Shooting

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬರ್ಲಿನ್​: ಉತ್ತರ ಜರ್ಮನಿಯ ಸ್ಟೇಡ್ ಪಟ್ಟಣದಲ್ಲಿ ಸೋಮವಾರ(ಜೂ. 29) ಭೀಕರ ಗುಂಡಿನ ದಾಳಿ(Shooting) ನಡೆದಿದ್ದು, ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ಮತ್ತು ದಾಳಿ ನಡೆಸಿದ ಇಬ್ವರು ಶಂಕಿತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಹ್ಯಾಂಬರ್ಗ್‌ನ ಪಶ್ಚಿಮಕ್ಕೆ ಸುಮಾರು 50,000 ಜನರಿರುವ ಸ್ಟೇಡ್ ಪಟ್ಟಣದಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿಯ ಹಿಂದಿನ ಉದ್ದೇಶವನ್ನು ತಿಳಿಯಲು ಪೊಲೀಸರು ಶಂಕಿತ ಬಂದೂಕುಧಾರಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಗುಂಡಿನ ದಾಳಿಯ ಸ್ವಲ್ಪ ಸಮಯದ ಬಳಿಕ ಲ್ನೆಬರ್ಗ್ ಪೊಲೀಸ್ ಪ್ರಧಾನ ಕಚೇರಿಯು, ತುರ್ತು ಕರೆ ನೀಡಿದ್ದು, ಘಟನಾ ನಡೆದ ಸ್ಥಳಕ್ಕೆ ಭದ್ರತೆ ಒದಗಿಸುವವರೆಗೆ ನಿವಾಸಿಗಳು ಆ ಪ್ರದೇಶಕ್ಕೆ ತೆರಳದಂತೆ ಮನವಿ ಮಾಡಿದೆ.
ಸ್ಥಳೀಯ ಮಾಧ್ಯಮಗಳು ಆರಂಭದಲ್ಲಿ ಸೆಂಟ್ರಲ್ ಸ್ಟೇಡ್‌ನಲ್ಲಿರುವ ಯುವ ಕೇಂದ್ರದ ಬಳಿ ಗುಂಡಿನ ದಾಳಿ ನಡೆದಿದೆ ಎಂದು ವರದಿ ಮಾಡಿದ್ದವು. ಆದರೆ, ಪೊಲೀಸ್ ವಕ್ತಾರರು ಆ ವರದಿಗಳನ್ನು ನಿರಾಕರಿಸಿದರು. ಮತ್ತು ಘಟನೆಯ ನಿಖರವಾದ ಸ್ಥಳವನ್ನು ಇನ್ನೂ ಬಹಿರಂಗಪಡಿಸಿಲ್ಲ. ಮೃತಪಟ್ಟವರು ಮಾಹಿತಿ ಮತ್ತು ಗುಂಡಿನ ದಾಳಿಯ ಉದ್ದೇಶವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net