ಡಿಸಿಎಂ ಉದಯನಿಧಿ ಹುಟ್ಟುಹಬ್ಬದಲ್ಲಿ ತುಂಡುಡುಗೆ ನೃತ್ಯ; ಸಚಿವರ ಚಪ್ಪಾಳೆ..! Udananiydhi Stalin

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಚೆನ್ನೈ: ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ತುಂಡುಡುಗೆ ತೊಟ್ಟ ಯುವತಿಯರ ನೃತ್ಯಕ್ಕೆ ಸಚಿವ ಎಸ್. ಪೆರಿಯಕರುಪ್ಪನ್ ಚಪ್ಪಾಳೆ ತಟ್ಟುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.
ಈ ಪ್ರದರ್ಶನವನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ಅಶ್ಲೀಲ ಎಂದು ಕರೆದಿದ್ದು, ಜನಪ್ರತಿನಿಧಿಯೊಬ್ಬರು ಈ ರೀತಿಯ ನೃತ್ಯವನ್ನು ನೋಡುವುದು ಹಾಗೂ ಚಪ್ಪಾಳೆ ತಟ್ಟುವುದು ಸರಿಯಲ್ಲ ಎಂದರೆ, ಇನ್ನು ಕೆಲವರು, ಸಚಿವರು ನೃತ್ಯಗಾರ್ತಿಯರನ್ನು ಹತ್ತಿರ ಬಂದು ನೃತ್ಯ ಮಾಡುವಂತೆ ಆಹ್ವಾನಿಸಿರುವುದು ಒಳ್ಳೆಯ ನಡೆಯಲ್ಲ ಎಂದಿದ್ದಾರೆ.

ವಿಡಿಯೋದಲ್ಲೇನಿದೆ?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿರುವ ದೃಶ್ಯಗಳಲ್ಲಿ ಡಿಎಂಕೆ ಸಚಿವರು, ಜಿಲ್ಲಾ ಮಟ್ಟದ ಪಕ್ಷದ ಕಾರ್ಯಕರ್ತರು ಮುಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದಾರೆ. ಈ ವೇಳೆ ನೃತ್ಯ ತಂಡವು ವೇದಿಕೆಯಲ್ಲಿ ಪ್ರದರ್ಶನ ಮಾಡುತ್ತಿರುವುದನ್ನು ಕಾಣಬಹುದು. ನಂತರ ಪ್ರದರ್ಶಕರನ್ನು ವೇದಿಕೆಯಿಂದ ತಮ್ಮ ಬಳಿ ಬರಲು ಆಹ್ವಾನಿಸಿ, ನೃತ್ಯ ಮಾಡುವಂತೆ ಸೂಚನೆ ನೀಡಿರುವುದನ್ನು ಈ ವಿಡಿಯೋ ತೋರಿಸುತ್ತದೆ.
ಈ ಘಟನೆಯು ಆಕ್ರೋಶ ಮತ್ತು ದುರ್ನಡತೆಯ ಆರೋಪಗಳ ಅಲೆಯನ್ನು ಹುಟ್ಟುಹಾಕಿದ್ದು, ತಮಿಳುನಾಡು ಬಿಜೆಪಿ ಘಟಕವು ದೃಶ್ಯವನ್ನು "ಗಂಭೀರ ಅವಮಾನ" ಎಂದು ಬಣ್ಣಿಸಿದೆ.
ಅರೆನಗ್ನ ಉಡುಪಿನಲ್ಲಿರುವ ಮಹಿಳೆಯರನ್ನು ತಮ್ಮ ಬಳಿ ಕರೆಸಿಕೊಂಡು ನೃತ್ಯ ಮಾಡಲು ಹೇಳಿ ಸಂತೋಷದಿಂದ ಚಪ್ಪಾಳೆ ತಟ್ಟುವ ನಾಯಕರ ಬಳಿ ತಮಿಳುನಾಡಿನ ಮಹಿಳೆಯರು ಹೇಗೆ ಕುಂದುಕೊರತೆಗಳನ್ನು ವ್ಯಕ್ತಪಡಿಸಬೇಕು? ಎಂದು ಪ್ರಶ್ನಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದೆ.
ಈ ಘಟನೆಯು ಎಐಎಡಿಎಂಕೆ ಪಕ್ಷದಿಂದಲೂ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪಕ್ಷದ ನಾಯಕ ಪಶುಪತಿ ಸೆಂಥಿಲ್ ಈ ದೃಶ್ಯವು ಸಾರ್ವಜನಿಕ ಗೌರವದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ನಿಮಗೆ ಇನ್ನು ದೊಡ್ಡ ಕರುಪ್ಪನ್ ಅವರ ಭೂತಕಾಲದ ಬಗ್ಗೆ ತಿಳಿದಿಲ್ಲವೆಂದು ಕಾಣುತ್ತದೆ. ಸಧ್ಯ ಇದು ಹಗಲು ಹೊತ್ತಿನಲ್ಲಿ ಸಂಭವಿಸಿದೆ, ಇಲ್ಲದಿದ್ದರೆ ಏನಾಗಿರಬಹುದು ಎಂದು ಯೋಚಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಅಂತರ್ಜಾಲದಲ್ಲಿ ಜನರು ಹೆಚ್ಚಿನ ಪ್ರತಿಕ್ರಿಯೆಯನ್ನು ನೀಡಿದ್ದು, ಒಬ್ಬ ಬಳಕೆದಾರರು ಇದು ಡಿಎಂಕೆಯ ಸ್ತ್ರೀವಾದವೇ, ಅವರ ಘನತೆಯೇ? ಇದು ನಾಚಿಕೆಗೇಡಿನ ಸಂಗತಿಯಲ್ಲವೇ? ಎಂದು ಪಕ್ಷದ ನಿಲುವನ್ನು ಪ್ರಶ್ನಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net