ಕಾಲೇಜಿಗೆ ಹೋಗುವುದಾಗಿ ಹೇಳಿ ಓಯೋ ರೂಮ್‌ಗೆ ಹೋದ ಮಗಳು: ಪ್ರಿಯಕರನ ಜೊತೆ ಇರುವಾಗಲೇ ತಾಯಿ ಎಂಟ್ರಿ! ಮುಂದೆ ನಡೆದಿದ್ದೇನು? Daughter in OYO

ಕಾಲೇಜಿಗೆ ಹೋಗುವುದಾಗಿ ಹೇಳಿ ಓಯೋಗೆ ಹೋದ ಮಗಳು
ಕಾಲೇಜಿಗೆ ಹೋಗುವುದಾಗಿ ಹೇಳಿ ಓಯೋಗೆ ಹೋದ ಮಗಳು
Published on

ಪ್ರಮುಖ ಮುಖ್ಯಾಂಶಗಳು

  • ಕಾಲೇಜಿಗೆ ಹೋಗುವುದಾಗಿ ಹೇಳಿ ಓಯೋಗೆ ಹೋದ ಮಗಳು
  • ಪೊಲೀಸರೊಂದಿಗೆ ಹೊಟೇಲ್​ ಮೇಲೆ ದಾಳಿ ಮಾಡಿದ ತಾಯಿ
  • ಸೋಶಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ವೈರಲ್​: ಭಾರತದಲ್ಲಿ ಇಂರ್ಟನೆಟ್​ ಕ್ರಾಂತಿಯಾದ ದಿನದಿಂದ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್​ಫೋನ್​ ಬಂದಿದೆ. ಹೀಗಾಗಿ ಮೊಬೈಲ್​ಲಿರುವ ಪ್ರತಿವ್ಯಕ್ತಿ ಕೂಡ ಕಂಟೆಂಟ್ ಕ್ರಿಯೇಟರ್​ ಆಗಿದ್ದಾರೆ. ಮಗಳು ಪ್ರಿಯಕರನೊಂದಿಗೆ  ಹೊಟೇಲ್​ ರೂಮ್​ (Daughter in OYO) ನಲ್ಲಿದ್ದಾಗ ತಾಯಿ ದಾಳಿ ನಡೆಸಿರುವ ವಿಡಿಯೋ ಸೋಶಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್​ ಆಗುತ್ತಿದೆ. 

ಕಾಲೇಜಿಗೆ ಹೋಗುತ್ತೆನೆಂದು ಹೇಳಿ ಓಯೋಗೆ ಹೋದ ಸುಂದರಿ!

ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ಮಗಳು ಓಯೋ ರೂಮ್​ನಲ್ಲಿ ತನ್ನ ಪ್ರಿಯಕರನೊಂದಿಗೆ ಇರುವಾಗ ಯುವತಿ ತಾಯಿ ಪೊಲೀಸರೊಂದಿಗೆ ದಾಳಿ ನಡೆಸಿದ್ದಾರೆ. ಕಾಲೇಜಿಗೆ ಹೋಗುತ್ತೆನೆಂದು ಹೇಳಿ ಇಲ್ಲೇನು ಮಾಡುತ್ತಿದ್ದಿಯಾ? ಎಂದು ತಾಯಿ ಕೇಳಿದ ಪ್ರಶ್ನೆಗೆ ಮಗಳು ಶಾಕ್​ ಆಗಿದ್ದಾಳೆ. 
ತಾಯಿ, ಮಗಳ ಈ ಜಟಾಪಟಿ ವಿಡಿಯೋವನ್ನು ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಈಗ ಈ ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.

ನೈಸ್​ ಸ್ಕ್ರಿಪ್ಟ್​ ಎಂದ ನೆಟ್ಟಿಗರು

ಈ ವಿಡಿಯೋ ಎಲ್ಲಡೆ ಹರಿ ದಾಡುತ್ತಿದಂತೆ, ನೆಟ್ಟಿಗರು ತಮ್ಮ ಕೈಗೆ ಕೆಲಸ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದರೆ ಗೊತ್ತಾಗುತ್ತೆ, ಇದು ಪ್ರೀ-ಫ್ಲ್ಯಾನ್ಡ್​ ಎಂದು ಒಬ್ಬ ಬಳಕೆದಾರ ಹೇಳಿದರೆ, ಓ.. ನೈಸ್​ ಸ್ಕ್ರಿಪ್ಟ್​  ಎಂದು ಇನ್ನೊಬ್ಬರು ಹೇಳಿದ್ದಾರೆ.
ಇನ್ನೂ ಕೆಲವರು ಈ ವಿಡಿಯೋಗೆ ಸಹಾನುಭೂತಿ ಸೂಚಿಸುತ್ತಾ, ನೋಡಿ ನಿಮ್ಮ ಮಕ್ಕಳ ಮೇಲೆ ಒಂದು ಕಣ್ಣನ್ನು ಯಾವತ್ತು ಇಟ್ಟಿಡಿ, ಅವರು ಎಲ್ಲಿಗೆ ಹೋಗುತ್ತಾರೆ? ಯಾರೊಂದಿಗೆ ಇರುತ್ತಾರೆ ಎಂದು ಪಾಲಕರಾದ ನಿಮಗೆ ತಿಳಿದಿರಲಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net