ತಮಿಳು ನಾಡು ವಿಧಾನಸಭೆ ಚುನಾವಣೆ ಬೆನ್ನಲ್ಲೇ AIADMKಯಲ್ಲಿ ಬಿಕ್ಕಟ್ಟು; ಪಳನಿಸ್ವಾಮಿ ರಾಜೀನಾಮೆಗೆ ಪಟ್ಟು?

AIADMK Split
AIADMK Split
Published on

ಪ್ರಮುಖ ಮುಖ್ಯಾಂಶಗಳು

  • ಬೇರೆ ಪಕ್ಷಗಳತ್ತ ಮುಖ ಮಾಡಿದರೆ, ನಾವು ನಮ್ಮನ್ನೇ ದುರ್ಬಲಗೊಳಿಸಿಕೊಂಡಂತೆ
  • ಟಿವಿಕೆಯತ್ತ ಒಲವು ತೋರುತ್ತಿರುವ ಕಾರ್ಯಕರ್ತರು, ಶಾಸಕರ ಬಗ್ಗೆ ಹಿರಿಯ ನಾಯಕ ಷಣ್ಮುಗಂ ಬೇಸರ
  • ಎಡಪ್ಪಾಡಿ ಪಳನಿಸ್ವಾಮಿ ಶಾಸಕರನ್ನು ಒಟ್ಟಾಗಿ ಇರಿಸಿಕೊಳ್ಳಲು ಪರದಾಡುವಂತಾಗಿದೆ.
ಚೆನ್ನೈ: ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಹೀನಾಯ ಸೋಲು ಕಂಡಿದೆ. ಆ ಬೆನ್ನಲ್ಲೇ ಕೆಲವು ಶಾಸಕರು ಮತ್ತು ಮಾಜಿ ಸಚಿವರು ಎಡ್ಡಪ್ಪಾಡಿ ಪಳನಿಸ್ವಾಮಿ ಅವರ ರಾಜೀನಾಮೆ ಆಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.
ಸರ್ಕಾರ ರಚನೆಗೆ ಪ್ರಾದೇಶಿಕ ಪಕ್ಷಗಳ ಬೆಂಬಲ ಕೋರುತ್ತಿದ್ದ ಹೊತ್ತಲ್ಲಿ AIADMK ನಾಯಕ ಪಳನಿಸ್ವಾಮಿ ತಮ್ಮ ಪಕ್ಷದ ಶಾಸಕರ ಜೊತೆ ಹಲವು ಸಭೆ ನಡೆಸಿದ್ದರು. ಆ ವೇಳೆ ಗೆದ್ದ ಶಾಸಕರು ಮತ್ತು ಷಣ್ಮುಗಂ ಬಣವು, ನಟ ವಿಜಯ್​ಗೆ ಬೆಂಬಲ ನೀಡಬೇಕೆಂದು ಹಲವರು ಒತ್ತಡ ಹೇರಿದ್ದರು. ಆದರೆ, ಎಡಪ್ಪಾಡಿ ಕೆ ಪಳನಿಸ್ವಾಮಿ ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ರೆಸಾರ್ಟ್​ನಲ್ಲಿ ಇರಿಸಿದ್ದು. ಆ ಬೆನ್ನಲ್ಲೇ AIADMKಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

ನಾಲ್ಕು ಸೋಲು ಯಾರಿಗೆ ಬೇಕು ನಾಯಕತ್ವ

ಸಿವಿ ಷಣ್ಮುಗಂ ಜೊತೆಗೆ ಮಾತನಾಡಿರುವ ಶಾಸಕರು ಹಾಗೂ ಮಾಜಿ ಸಚಿವರು ಸತತ ನಾಲ್ಕು ಚುನಾವಣಾ ಸೋಲುಗಳ ಪಳನಿಸ್ವಾಮಿ ನಾಯಕತ್ವ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.

ಶಾಸಕರ ನಡೆಗೆ ಬೇಸರ

ಮಾಜಿ ಸಚಿವ ಸಿವಿ ಷಣ್ಮುಗಂ ಅವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಸಭೆಯೊಂದರಲ್ಲಿ ಮಾತನಾಡಿದ್ದ ಅವರು, AIADMK ಶಾಸಕರು ಮತ್ತು ಜಿಲ್ಲಾ ಕಾರ್ಯದರ್ಶಿಗಳು ದಳಪತಿ ವಿಜಯ್ ಅವರ ಹೊಸ ಪಕ್ಷದೊಂದಿಗೆ ಮೈತ್ರಿ ಅಥವಾ ಪಕ್ಷಾಂತರದ ಮಾತುಕತೆ ನಡೆಸುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಅವರು ಇದೇ ಪ್ರವೃತ್ತಿ ಮುಂದುವರೆಸಿದರೆ, ಪಕ್ಷ ಇಬ್ಭಾಗವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

47 ಸ್ಥಾನಗಳನ್ನು ಮಾತ್ರ ಗೆಲುವು

ಏಪ್ರಿಲ್​ನಲ್ಲಿ 23ರಂದು 234 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 108 ಸ್ಥಾನವನ್ನು ಟಿವಿಕೆ ಗೆದ್ದುಕೊಂಡಿತ್ತು. ಇನ್ನು 75 ಸ್ಥಾನಗಳನ್ನು ಮಾತ್ರ ಮೈತ್ರಿ ಕೂಟ ಗಳಿಸಿತ್ತು. 47 ಸ್ಥಾನಗಳನ್ನು ಮಾತ್ರ ಎಐಎಡಿಎಂಕೆ ಗಳಿಸಿ ಹೀನಾಯ ಸೋಲನ್ನು ಕಂಡಿತ್ತು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 39 ಸ್ಥಾನಗಳಲ್ಲಿ ಮಾತ್ರ ಗೆದ್ದುಕೊಂಡಿತ್ತು. ಇನ್ನು 2024ರಲ್ಲಿ ಶೂನ್ಯ ಕ್ಷೇತ್ರವನ್ನು ಸಂಪಾದನೆ ಮಾಡಿ ಹೀನಾಯ ಸೋಲನ್ನು ಎಐಎಡಿಎಂಕೆ ಕಂಡಿತ್ತು.

ಸಭೆಗಳಿಗೆ ಗೈರು

ಇತ್ತೀಚೆಗೆ ಎಸ್​ಪಿ ವೇಲು ಮಣಿ ಮತ್ತು ಷಣ್ಮುಗಂ ಅವರು ಪಳನಿಸ್ವಾಮಿ ಅವರು ನಡೆಸುವ ಸಭೆಗಳಿಗೆ ಗೈರು ಹಾಜರಾಗಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಷಣ್ಮುಗಂ ಅವರ ಬೆಂಬಲಿಗರು ಸಹ ಇದೇ ಹಾದಿಯಲ್ಲಿದ್ದಾರೆ ಎನ್ನಲಾಗುತ್ತಿದೆ
ಷಣ್ಮುಗಂ ಏನಂದ್ರು?
ವಿಜಯ್​ ರಾಜಕೀಯಕ್ಕೆ ಕಾಲಿಡುತ್ತಲೇ ಎಐಎಡಿಎಂಕೆನ ನಾಯಕರು ವಿಜಯ್​ ಪಕ್ಷದತ್ತ ವಾಲಿಕೊಳ್ಳಲು ಶುರುವಿಟ್ಟುಕೊಂಡಿದ್ದಾರೆ. ಎಡಪ್ಪಾಡಿ ಪಳನಿಸ್ವಾಮಿ ಅವರ ನಾಯಕತ್ವದ ಮೇಲೆ ಅಸಮಾಧಾನ ಹೊಂದಿರುವ ಕೆಲವು ನಾಯಕರು ವಿಜಯ್ ಜೊತೆ ಕೈಜೋಡಿಸಲು ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಜೀನಾಮೆಗೂ ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net