ರಾಮ ಮಂದಿರ ದೇಣಿಗೆ ಕಳ್ಳತನವನ್ನು ಮಹಾಪಾಪ ಎಂದ ಕಾಂಗ್ರೆಸ್; ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆಗ್ರಹ | Congress

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನವನ್ನು ಮಹಾಪಾಪ ಎಂದಿರುವ ಕಾಂಗ್ರೆಸ್(Congress), ಶನಿವಾರ(ಜು. 11) ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಬಗ್ಗೆ ಅನುಮಾನಗಳಿದ್ದು, ಈ ಹಿನ್ನೆಲೆ ಸುಪ್ರೀಂಕೋರ್ಟ್​ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್, ದೇಣಿಗೆ ಕಳ್ಳತನವನ್ನು ಮಹಾ ಪಾಪ ಎಂದು ಕರೆದಿದ್ದು, ಕಳ್ಳತನಕ್ಕೆ ಕಾರಣರಾದವರನ್ನು ಬಂಧಿಸಬೇಕು. ಮ ತ್ತು ದೇವಾಲಯವನ್ನು ನಿರ್ವಹಿಸುವ ಟ್ರಸ್ಟ್ ಅನ್ನು ತಕ್ಷಣವೇ ವಿಸರ್ಜಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.
ನಕಲಿ ಪ್ರಕರಣ ಎದುರಿಸುತ್ತಿರುವ ವ್ಯಕ್ತಿಯೊಬ್ಬರು ಎಸ್‌ಐಟಿ ನೇತೃತ್ವ ವಹಿಸಿದ್ದಾರೆ ಎಂದು ಆರೋಪಿಸಿದ ಅವರು, ಕಳ್ಳ ಇನ್ನೊಬ್ಬ ಕಳ್ಳನನ್ನು ಹಿಡಿಯುತ್ತಾನೆಯೇ? ಬೆಕ್ಕಿನಿಂದ ಹಾಲನ್ನು ರಕ್ಷಿಸುವಂತೆ ಕೇಳಬಹುದೇ ಎಂದು ಪ್ರಶ್ಮಿಸಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ರಾಜಕೀಯ ಉದ್ದೇಶಗಳಿಗಾಗಿ ಧರ್ಮವನ್ನು ಬಳಸುತ್ತಿವೆ. ಆದರೆ ಕಾಂಗ್ರೆಸ್ ಅದೇ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿಕ್ರಿಯಿಸುವುದಿಲ್ಲ. ಧಾರ್ಮಿಕ ವಿಷಯಗಳ ಮೇಲೆ ಅಲ್ಲ, ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಗಳ ಮೇಲೆ ನಾವು ಜನರನ್ನು ಸಜ್ಜುಗೊಳಿಸುತ್ತೇವೆ. ಬಿಜೆಪಿ ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಧರ್ಮದ ಮೇಲೆ ರಾಜಕೀಯ ಮಾಡುವುದಿಲ್ಲ, ಆದರೆ ಭಕ್ತರು ನೀಡುವ ಕಾಣಿಕೆಗಳ ದುರುಪಯೋಗದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ. ದೇವಾಲಯವನ್ನು ನಿರ್ವಹಿಸುವ ಟ್ರಸ್ಟ್ ಅನ್ನು ತಕ್ಷಣವೇ ವಿಸರ್ಜಿಸಬೇಕು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದೇವಾಲಯವನ್ನು ನಿರ್ಮಿಸಲಾಗಿದೆ. ಮತ್ತು ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ತಿಳಿಸಿದ್ದಾರೆ.
ಹಗರಣದ ತನಿಖೆಯಲ್ಲಿ ಕೇವಲ ಸಣ್ಣ ಕಾರ್ಯಕರ್ತರಷ್ಟೇ ಅಲ್ಲದೇ, ಅಯೋಧ್ಯೆಯಿಂದ ದೆಹಲಿಯವರೆಗೆ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಬೇಕು. ದೇವಾಲಯದೊಳಗೆ ಕಳ್ಳತನ ನಡೆಯುವುದಕ್ಕಿಂತ ದೊಡ್ಡ ಪಾಪ ಇನ್ನಾವುದೇ ಇದೆಯೇ ಹೇಳಿ? ಅಂತಹ ಪಾಪ ಸಂಭವಿಸಿದ್ದರೆ, ಅದಕ್ಕೆ ಕಾರಣರಾದವರನ್ನು ಬಂಧಿಸಬೇಕು ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net