ಹೋರಾಟ ಕೈಬಿಡಲು ಕಾಕ್ರೋಚ್​ ನಾಯಕರು ಮುಂದಾಗಿದ್ದರು: ಲಾಠಿ ಏಟಿಗೆ ಮನೋಬಲ ಕುಗ್ಗಿತ್ತು; ಕೊನೆಗೆ ನಾನು... ಸೋನಮ್​ ವಾಂಗ್​ಚುಕ್​ ಮಾಡಿದ್ದೇನು? Sonam Wangchuk

ಖ್ಯಾತ ಪರಿಸರವಾದಿ ಸೋನಮ್​ ವಾಂಗ್​ಚುಕ್​​
ಖ್ಯಾತ ಪರಿಸರವಾದಿ ಸೋನಮ್​ ವಾಂಗ್​ಚುಕ್​​
Published on
ನವದೆಹಲಿ: ಕಳೆದ ತಿಂಗಳು ನೀಟ್​ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮವನ್ನು ವಿರೋಧಿಸಿ, ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್​​-ಮಂತರ್​ನಲ್ಲಿ ಬೃಹತ್​ ಪ್ರತಿಭಟನೆ ನಡೆದಿತ್ತು.

ಖ್ಯಾತ ಪರಿಸರವಾದಿ ಸೋನಮ್​ ವಾಂಗ್​ಚುಕ್​ ಸುಮಾರು 26 ದಿನಗಳವರೆಗೆ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ಕೊನೆಗೆ ಈ ಹೋರಾಟಕ್ಕೆ ಮಣಿದ ಸರ್ಕಾರ, ಮುಂದಿನ ದಿನಗಳಲ್ಲಿ ಪರೀಕ್ಷಾ ಅಕ್ರಮಗಳು ನಡೆಯದಂತೆ ಮಸೂದೆ ಮಂಡಿಸಿ, ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್​ ಅವರ ರಾಜೀನಾಮೆಯನ್ನು ಕೂಡ ಪಡೆಯಲಾಗಿತ್ತು.

ಈಗ, ಈ ಜಂತರ್​-ಮಂತರ್​ ಹೋರಾಟದ ಬಗ್ಗೆ ಸೋನಮ್​ ವಾಂಗ್​ಚುಕ್​ (Sonam Wangchuk) ಪಾಡ್​ಕಾಸ್ಟ್​ವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅದು ಈಗ ಎಲ್ಲಡೆ ವೈರಲ್​ ಆಗುತ್ತಿದೆ.

ಜುಲೈ 20 ರಂದೇ ಹೋರಾಟ ಮುಗಿಯುತ್ತಿತ್ತು!

ಈ ಪ್ರತಿಭಟನೆ ಬಗ್ಗೆ ಮಾತನಾಡುತ್ತಾ ಸೋನಮ್​ ವಾಂಗ್​​ಚುಕ್​, ಜುಲೈ 20 ರಂದು ಸಂಸತ್​ ಚಲೋ ನಡೆಸಿದಾಗ, ದೆಹಲಿ ಪೊಲೀಸರು ಬಹಳ ಕಠಿಣ ಕ್ರಮವನ್ನು ಕೈಗೊಂಡಿದ್ದರು. ಪೊಲೀಸರ ಲಾಠಿ ಏಟು, ಅಶ್ರವಾಯು ಹಾಗೂ ಪೆಲೆಟ್​ ಗನ್ನಿನ ಗುಂಡನ್ನು ತಿಂದಿದ್ದ ಪ್ರತಿಭಟನಾಕಾರರ ಮನೋಬಲ ಕುಸಿದು ಹೋಗಿತ್ತು.

ಹೋರಾಟ ಇಲ್ಲಿಗೆ ಸಾಕು, ನಾಳೆಯಿಂದ ಹೋರಾಟವನ್ನು ನಿಲ್ಲಿಸಿ ಬಿಡುವ ಎನ್ನುವ ಮಟ್ಟಿಗೆ ಅಲ್ಲಿದ್ದ ಜನರು ಬಂದು ಬಿಟ್ಟಿದ್ದರು. ಹಾಗೆಯೇ ನನಗೆ, ಈ ಹೋರಾಟ ಇಲ್ಲಿಗೆ ಮುಕ್ತಾಯವಾಗಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನಗೆ ಮರಳುವಂತೆ ಹೇಳಬೇಕೆಂದು ಕಾಕ್ರೋಚ್ ಪಾರ್ಟಿ ಮುಖಂಡರು ತಿಳಿಸಿದ್ದರೆಂದು ವಾಂಗ್​ಚುಕ್​ ತಿಳಿಸಿದ್ದಾರೆ.


ನಾನು ಅವರಿಗೆ ಹುರಿದುಂಬಿಸಿದೆ!

ಪೊಲೀಸರ ಲಾಠಿ ಏಟಿನಿಂದ ಹಾಗೂ ಪೊಲೀಸರ ದಂಡಾತ್ಮಕ ಕ್ರಮದಿಂದ ಕಾಕ್ರೋಚ್​ ಪಾರ್ಟಿ ನಾಯಕರು ತುಂಬಾ ದುಃಖಿತರಾಗಿದ್ದರು. ಹೋರಾಟವನ್ನು ನಾಳೆಯಿಂದ ಮುಂದುವರಿಸಲು ಸಾಧ್ಯವಿಲ್ಲವೆಂದು ನೊಂದುಕೊಂಡಿದ್ದರು.
ಆ ಸಂದರ್ಭದಲ್ಲಿ ನಾನು, ಅವರಿಗೆ ಧೈರ್ಯ ಹೇಳಿದೆ, ಸಾಧ್ಯವಾದಷ್ಟು ಹುರಿದುಂಬಿಸಿದೆ. ನಾಳೆ ಈ ಹೋರಾಟ ಖಂಡಿತ ಫಲ ಕೊಡುತ್ತದೆ, ಚಿಂತಿಸಬೇಡಿ ಎಂದೆ. ಕೊನೆಗೆ ಕಾಕ್ರೋಚ್​ ಪಾರ್ಟಿ ಹೋರಾಟನ್ನು ಮುಂದುವರಿಸಿತು, ಹಾಗೂ ಈ ಹೋರಾಟ ಸಫಲವಾಯಿತೆಂದು ಅವರು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net