ದೇಶದಲ್ಲಿ ಹೆಚ್ಚಾದ ಕಾಕ್ರೋಚ್​ ಕ್ರೇಜ್​: 'ಹೆಮ್ಮೆಯ ಜಿರಳೆ' ಟೀ-ಶರ್ಟ್​ ಫುಲ್​ ವೈರಲ್​! Proud Cockroach Tshirt

ಹೆಮ್ಮೆಯ ಜಿರಳೆ ಟೀ-ಶರ್ಟ್ ಈಗ ಟ್ರೆಂಡಿಂಗ್​
ಹೆಮ್ಮೆಯ ಜಿರಳೆ ಟೀ-ಶರ್ಟ್ ಈಗ ಟ್ರೆಂಡಿಂಗ್​
Published on

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ ಹೆಚ್ಚಾದ ಕಾಕ್ರೋಚ್​ ಕ್ರೇಜ್​
  • ಹೆಮ್ಮೆಯ ಜಿರಳೆ ಟೀ-ಶರ್ಟ್ ಈಗ ಟ್ರೆಂಡಿಂಗ್​
  • ಸೋಷಿಯಲ್​ ಮೀಡಿಯಾನಲ್ಲಿ ಧೂಳೆಬ್ಬಿಸುತ್ತಿರುವ ಕಾಕ್ರೋಚ್​ ಜನತಾ ಪಾರ್ಟಿ
ವೈರಲ್: ದೇಶದಲ್ಲಿ ಒಂದು ವಾರದಿಂದ ಕಾಕ್ರೋಚ್​ ಜನತಾ ಪಾರ್ಟಿ ಎಂಬ ಸೋಷಿಯಲ್​ ಮೀಡಿಯಾ ಅಕೌಂಟ್​ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಭಾರತದ ಮುಖ್ಯನ್ಯಾಯಮೂರ್ತಿಗಳು ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಿದ ದಿನದಿಂದ ಈ ಸೋಷಿಯಲ್​ ಮೀಡಿಯಾ ಕ್ರಾಂತಿ ಜೋರಾಗಿದೆ.
ಈ ಕಾಕ್ರೋಚ್​ ಪಕ್ಷಕ್ಕೆ ಝೇನ್​ಜೀ ಯುವಕ/ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳುತ್ತಿದ್ದು, ಈಗ ಈ ಪಕ್ಷಕ್ಕೆ ಬೆಂಬಲ ಸೂಚಿಸುವ ಟೀ-ಶರ್ಟ್​ಗಳು ಮಾರಿಕಟ್ಟೆಗೆ ಲಗ್ಗೆ ಇಟ್ಟಿವೆ. ಈಗ ಈ ಟೀ-ಶರ್ಟ್​ ತಯಾರಿಕೆ ಹಾಗೂ ಪ್ಯಾಕಿಂಗ್​ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ (Proud Cockroach Tshirt) ಆಗುತ್ತಿವೆ.

ವಿಡಿಯೋನಲ್ಲಿ ಏನಿದೆ?

ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ಪ್ರಿಂಟಡ್​ ಟೀ-ಶರ್ಟ್​ ತಯಾರಿಕಾ ಘಟಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಕ್ರೋಚ್​ ಪಾರ್ಟಿಗೆ ಸಪೋರ್ಟ್​ ನೀಡುವ ಟೀ-ಶರ್ಟ್​ಗಳನ್ನು ತಯಾರಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ.
ಪ್ರಿಂಟ್ ಮಾಡಲಾಗುತ್ತಿರುವ ಟೀ-ಶರ್ಟ್​ಗಳ ಮೇಲೆ, ನಾನು ಕಾಕ್ರೋಚ್​ ಪಾರ್ಟಿಯನ್ನು ಬೆಂಬಲಿಸುತ್ತೇನೆ, ಎದ್ದೇಳು ಝೇನ್​ಜೀ, ಹೆಮ್ಮೆಯ ಕಾಕ್ರೋಚ್​ ಎಂಬ ಬರಹಗಳನ್ನು ನೋಡಬಹುದಾಗಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ಟೀ-ಶರ್ಟ್​ ಪ್ರಿಂಟಿಂಗ್​ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರಿಂದ ಕಮೆಂಟ್​ಗಳ ಸುರಿಮಳೆ ಹರಿದು ಬಂದಿದೆ. ಈ ಕಾಕ್ರೋಚ್​ಗಳನ್ನು ಚಪ್ಪಲಿಯಿಂದ ಹೊಡೆದು ಕೊಲ್ಲಬೇಕು ಎಂದು ಒಬ್ಬರು ಕಮೆಂಟ್​ ಮಾಡಿದರೆ, ಈ ರೋಗ ಹರಡುವ ಜೀವಿಯನ್ನು ಜಾಸ್ತಿದಿನ ಬದುಕಲು ಬಿಡಬಾರದು ಎಂದು ಇನ್ನೊಬ್ಬರು ಹೇಳಿದ್ದಾರೆ. ಅಂತೂ ನಮ್ಮ ದೇಶದಲ್ಲಿ ಸರ್ಕಾರವನ್ನು ಪ್ರಶ್ನಿಸಿಲು ಜಿರಳೆ ಜನ್ಮ ಎತ್ತಿ ಬರಬೇಕಾಯಿತು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

BJP ಯನ್ನು ಹಿಂದಿಕ್ಕಿದ CJP

ಸೋಷಿಯಲ್​ ಮೀಡಿಯಾನಲ್ಲಿ ಈ ಕಾಕ್ರೋಚ್​ ಜನತಾ ಪಾರ್ಟಿಗೆ ವ್ಯಾಪಕ ಬೆಂಬಲ ದೊರೆಯುತ್ತಿದ್ದು, ಪಕ್ಷ ಪ್ರಾರಂಭವಾದ ಐದೇ ದಿನಗಳಲ್ಲಿ ಇದು ಸುಮಾರು 1.50 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ 87 ಲಕ್ಷ ಹಿಂಬಾಲಕರನ್ನು ಹೊಂದಿರುವ ಬಿಜೆಪಿಯನ್ನು ಹಾಗೂ 1.33 ಕೋಟಿ ಹಿಂಬಾಲಕರನ್ನು ಹೊಂದಿರುವ ಕಾಂಗ್ರೆಸ್​ ಪಾರ್ಟಿಯನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ಕುಳಿತು ಕೊಂಡಿದೆ.

ಏನು ಈ ಕಾಕ್ರೋಚ್​ ಜನತಾ ಪಾರ್ಟಿ?

ಕೆಲ ದಿನಗಳ ಹಿಂದೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಜ. ಸೂರ್ಯಾಕಾಂತ್​ ಅವರು ಭಾರತದ ನಿರುದ್ಯೋಗಿ ಯುವಕರನ್ನು ಜಿರಲೆ(ಕಾಕ್ರೋಚ್​) ಗಳಿಗೆ ಹೋಲಿಕೆ ಮಾಡಿದ ನಂತರ, ಆಮ್​ ಆದ್ಮಿ ಪಕ್ಷದ ಕಾರ್ಯಕರ್ತನೆಂದು ಗುರುತಿಸಿಕೊಂಡಿದ್ದ, ಅಭಿಜಿತ್ ದಿಪ್ಕೆ ಈ ಕಾಕ್ರೋಚ್​ ಜನತಾ ಪಾರ್ಟಿಯನ್ನು ಸೋಷಿಯಲ್​ ಮೀಡಿಯಾನಲ್ಲಿ ಸ್ಥಾಪಿಸಿದರು. ಈ ಜಿರಲೆ ಪಕ್ಷವು ತನ್ನನ್ನು ತಾನು, ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ, ಸೋಮಾರಿ ತತ್ವಗಳನ್ನು ಪಾಲಿಸುವ ಪಕ್ಷವೆಂದು ಹೇಳಿಕೊಂಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net