ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉದ್ಧವ್, ನಾವಿಬ್ಬರು ಶಾಶ್ವತವಾಗಿ ಒಗ್ಗಟ್ಟಿನಿಂದ ಇರಲು ಒಗ್ಗೂಡಿದ್ದು, ಮರಾಠಿ ಜನರ ಅಭಿವೃದ್ದಿಗಾಗಿ ಇದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಮಹಾರಾಷ್ಟ್ರಕ್ಕಾಗಿ ಹೋರಾಟ ನಡೆಸಿದ ತಮ್ಮ ಅಜ್ಜ ಪ್ರಬೋಧಂಕರ್ ಠಾಕ್ರೆ ಪರಂಪರೆಯನ್ನು ನೆನಪಿಸಿಕೊಂಡ ಉದ್ಧವ್, ಮುಂಬೈ ರಾಜ್ಯದ ಭಾಗವಾದ ಬಳಿಕ, ಬಾಳಾಸಾಹೇಬ್ ಠಾಕ್ರೆ ಶಿವಸೇನೆಯನ್ನು ಸ್ಥಾಪಿಸಿದರು ಎಂದು ಹೇಳಿದರು. ಕೆಲವು ಶಕ್ತಿಗಳು ಮುಂಬೈಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದು, ಮುಂಬೈಯನ್ನು ಮರಾಠಿ ಜನರಿಂದ ಕಿತ್ತುಕೊಳ್ಳಲು ಯಾವುತ್ತಿಗೂ ಸಾಧ್ಯವಿಲ್ಲ ಎಂದರು. ಬಿಜೆಪಿಯ ಬಟೇಂಗೆ ತೋ ಕಟೇಂಗೆ ಘೋಷಣೆಯನ್ನು ಉಲ್ಲೇಖಿಸಿದ ಉದ್ಧವ್ ಠಾಕ್ರೆ, ನಾವೆಲ್ಲಾ ಒಗ್ಗಟ್ಟಿನಿಂದ ಇರಬೇಕೆಂದು ಕರೆ ನೀಡಿದರು, ಈಗ ನಾವು ಎಡವಿದರೆ ಅದು ವಿಭಜನೆಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.