ಸೋಷಿಯಲ್ ಮೀಡಿಯಾ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ; ಫೇಸ್​​ಬುಕ್, ಎಕ್ಸ್​, ಗೂಗಲ್​ಗೆ ಸಂಸದೀಯ ಸಮಿತಿ ಸಮನ್ಸ್ | Central government

ಸಂಸತ್ತು
ಸಂಸತ್ತು
Published on
ನವದೆಹಲಿ: ನೀಟ್ ಪರೀಕ್ಷೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ಯಶಸ್ವಿಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ(Central government) ಮುಂದಾಗಿದ್ದು, ಸಂಸದೀಯ ಸಮಿತಿಯು ಮೆಟಾ, ಗೂಗಲ್, ಎಕ್ಸ್ ಹಾಗೂ ಸ್ನ್ಯಾಪ್‌ಚಾಟ್‌ನಂತಹ ಪ್ರಮುಖ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಆಗಸ್ಟ್ 03ರಂದು ಸಭೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಮಂಗಳವಾರ ಹೊರಡಿಸಲಾದ ಸೂಚನೆಯ ಪ್ರಕಾರ, ಕಾರ್ಯಸೂಚಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಗೃಹ ವ್ಯವಹಾರ ಸಚಿವಾಲಯ, ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮ ವೇದಿಕೆಗಳಾದ ಸ್ನ್ಯಾಪ್‌ಚಾಟ್, ಗೂಗಲ್, ಎಕ್ಸ್, ಮೆಟಾ (ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್) ಪ್ರತಿನಿಧಿಗಳಿಂದ 'ಸಾಮಾಜಿಕ ಮತ್ತು ಡಿಜಿಟಲ್ ವೇದಿಕೆಗಳು ಹಾಗೂ ಅವುಗಳ ನಿಯಂತ್ರಣ' ವಿಷಯದ ಕುರಿತು ಮಾಹಿತಿ ಪಡೆಯುವುದು ಸೇರಿದೆ.
ಸಭೆ ಬಗ್ಗೆ ಮಾಹಿತಿ ನೀಡಿರುವ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಬಳಕೆದಾರರ ಗೌಪ್ಯತೆಯನ್ನು ಹೇಗೆ ರಕ್ಷಿಸುತ್ತದೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಏನು ಮಾಡಲಾಗುತ್ತದೆ ಎಂಬುದನ್ನು ವಿವರಿಸಲು ಸಮಿತಿಯು ಕಂಪನಿಗಳನ್ನು ಕರೆದಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, 2026 ಆಗಸ್ಟ್​ 03ರಂದು ಸಂಜೆ 4 ಗಂಟೆಗೆ, ನಮ್ಮ ಐಟಿ ಮತ್ತು ಸಂವಹನ ಸಂಸದೀಯ ಸಮಿತಿಯು ಮೆಟಾ (ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ವಾಟ್ಸಾಪ್), ಎಕ್ಸ್ (ಟ್ವಿಟರ್), ಸ್ನ್ಯಾಪ್‌ಚಾಟ್ ಮತ್ತು ಗೂಗಲ್‌ಗೆ ಸಮನ್ಸ್ ಜಾರಿ ಮಾಡಿದೆ. ಮಹಿಳೆಯರು, ಮಕ್ಕಳು, ರೈತರು, ಗ್ರಾಮೀಣ ಜನರು, ಕಾರ್ಮಿಕರು ಮತ್ತು ಸಾರ್ವಜನಿಕರ ಗೌಪ್ಯತೆಯನ್ನು ಹೇಗೆ ರಕ್ಷಿಸಲಾಗುತ್ತದೆ? ಈ ಕಂಪನಿಗಳು ಸರ್ಕಾರದ ಸಾರ್ವಜನಿಕ ಸುವ್ಯವಸ್ಥೆಯನ್ನು ಹೇಗೆ ಖಚಿತಪಡಿಸುತ್ತವೆ? ಮಾಹಿತಿ ಪಡೆಯಲಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net