2025 ರ ಡಿಸೆಂಬರ್ 19 ರಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಲೋಕಪಾಲರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪಿನ ಪ್ಯಾರಾ 89 ಕ್ಕೆ ತಡೆ ನೀಡಿದೆ. ಈ ಪ್ಯಾರಾಗ್ರಾಫ್ನಲ್ಲಿ, ಲೋಕಪಾಲರು ಸಿಬಿಐಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಲಾಗಿತ್ತು ಮತ್ತು ನಿಯಮಗಳ ಅಡಿಯಲ್ಲಿ ಮರು-ಪರಿಶೀಲಿಸುವಂತೆ ಸೂಚಿಸಲಾಗಿತ್ತು.