ಟೊರೊಂಟೊದ ಜನನಿಬಿಡ ರಸ್ತೆಯಲ್ಲಿ ಭಾರತೀಯ ಯುವ ಜನತೆ ಭಾರತದ ಶೈಲಿಯಲ್ಲಿ ನೃತ್ಯ ಮಾಡಿ, ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಆನ್ಲೈನ್ನಲ್ಲಿ ಜಾಗತಿಕ ಚರ್ಚೆಯನ್ನು ಹುಟ್ಟುಹಾಕಿದೆ. ಇವು ಭಾರತೀಯರಿಗೆ ಸಂತೋಷ ಹಾಗೂ ಕಣ್ಣಿಗೆ ಸಂಭ್ರಮವನನ್ನು ತಂದುಕೊಟ್ಟಿದೆಯಾದರೂ, ಕೆನಡಾದ ಸ್ಥಳೀಯರು ಈ ಬಗ್ಗೆ ಕೆಂಡಕಾರಿದ್ದಾರೆ. ವಿರೋಧ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.