Kanwar Yatra ಮುಕ್ತಾಯ: ಹರಿದ್ವಾರದ ಹರ್ ಕಿ ಪೌರಿ ಘಾಟ್​ನಲ್ಲಿ ರಾಶಿ ರಾಶಿ ಕಸ, ಮೂತ್ರ ತುಂಬಿದ ಬಾಟಲಿಗಳು ಪತ್ತೆ!

Haridwar's Struggle After Kanwar Yatra
Haridwar's Struggle After Kanwar Yatra
Published on

ಪ್ರಮುಖ ಮುಖ್ಯಾಂಶಗಳು

  • ​ ಕನ್ವರ್​ ಯಾತ್ರೆ ಹಿನ್ನೆಲೆ ಹರಿದ್ವಾರಕ್ಕೆ 5 ಕೋಟಿಗೂ ಹೆಚ್ಚು ಭಕ್ತರ ಭೇಟಿ.
  • ಪ್ಲಾಸ್ಟಿಕ್, ಬಟ್ಟೆ ಸೇರಿದಂತೆ ​ 7,000 ಟನ್ ಕಸವನ್ನು ವಿಲೇವಾರಿ ಮಾಡಿದ ಸ್ಥಳೀಯ ಆಡಳಿತ
  • ​ಬಟ್ಟೆಗಳು, ಪ್ಲಾಸ್ಟಿಕ್ ವಸ್ತುಗಳು ಮತ್ತು ಮೂತ್ರ ತುಂಬಿದ ಬಾಟಲಿಗಳ ರಾಶಿ ಪತ್ತೆ, ನೆಟ್ಟಿಗರು ಕಿಡಿ

ಹರಿದ್ವಾರ: ಪ್ಲಾಸ್ಟಿಕ್​, ಬಟ್ಟೆಗಳು, ಮೂತ್ರ ತುಂಬಿದ ನೀರಿನ ಬಾಟಲಿಗಳು, ಹೂ, ಪೇಪರ್,​​ ಬ್ಯಾಗ್​, ಚಪ್ಪಲಿ ಸೇರಿದಂತೆ ​ರಾಶಿ ರಾಶಿ ಕಸ ಕಂಡು ಬಂದಿದ್ದು ದೇವಭೂಮಿ ಎನಿಸಿಕೊಂಡ ಉತ್ತರಾಖಂಡದ 'ಹರ್ ಕಿ ಪೌರಿ'ಯ ಘಾಟ್‌ಗಳಲ್ಲಿ.

ಹೌದು, ಕನ್ವರ್​ ಯಾತ್ರೆ ಮುಕ್ತಾಯಗೊಂಡ ನಂತರ

ಹರಿದ್ವಾರದಲ್ಲಿ

ಪುರಸಭೆ ಅಧಿಕಾರಿಗಳು, ಸಿಬ್ಬಂದಿಯನ್ನು ಸ್ವಚ್ಛತಾ ಕಾರ್ಯಕ್ಕೆ ಇಳಿಸಿದ್ದರು. ಈ ವೇಳೆ

7,000 ಟನ್ ಗೂ ಅಧಿಕ ಕಸ ಪತ್ತೆಯಾಗಿದ್ದು, ರಾಶಿ..ರಾಶಿ ತ್ಯಾಜ್ಯ ಸಾಗಿಸುತ್ತಿರುವ, ವಿಂಗಡನೆ ಮಾಡುತ್ತಿರುವ ವಿಡಿಯೋಗಳು

ಸೋಶಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಭಕ್ತರಿಂದ ಪರಿಸರ ಹಾಳು


'ಹರ್ ಕಿ ಪೌರಿ'ಯ ಘಾಟ್‌ಗಳಲ್ಲಿ ಇರುವ ಬಟ್ಟೆ ಬದಲಿಸುವ ಕೋಣೆಯಲ್ಲಿ ಮೂತ್ರ ತುಂಬಿಟ್ಟ ಪ್ಲಾಸ್ಟಿಕ್​ ಬಾಟಲ್​, ಬಟ್ಟೆಗಳು, ಪ್ಲಾಸ್ಟಿಕ್​ ಕವರ್​, ಹೂಗಳು ಎಲ್ಲವನ್ನೂ ಬಿಟ್ಟು ಹಾಗೆಯೇ ಗಮ್ಯ ಸ್ಥಾನಕ್ಕೆ ತೆರಳಿರುವ ಭಕ್ತರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಗಾ ನದಿಯನ್ನು ಪವಿತ್ರವೆಂದು ಭಾವಿಸಿ ಯಾತ್ರೆ ಕೈಗೊಳ್ಳುವ ಭಕ್ತರೇ ಈ ರೀತಿ ಪರಿಸರವನ್ನು ಮಲಿನಗೊಳಿಸುತ್ತಿರುವುದು ದುರದೃಷ್ಟಕರ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ವಚ್ಛತಾ ಸಿಬ್ಬಂದಿ ಆರೋಗ್ಯದ ಬಗ್ಗೆ ಕಾಳಜಿ

ಸ್ವಚ್ಛತಾ ಸಿಬ್ಬಂದಿ

ಕಸದ ರಾಶಿಯನ್ನು

ಕೈಗವಸು ಅಥವಾ ಮಾಸ್ಕ್ ಇಲ್ಲದೆ, ಕೇವಲ ಸಲಿಕೆಗಳನ್ನು ಬಳಸಿ ಈ ತ್ಯಾಜ್ಯವನ್ನು ತೆರವುಗೊಳಿಸುತ್ತಿರುವ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅವರ ಆರೋಗ್ಯದ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

7,000 ಟನ್ ಗೂ ಅಧಿಕ ಕಸ ಪತ್ತೆ


ಘಾಟ್​ಗಳಲ್ಲಿ, ಪಾರ್ಕಿಂಗ್ ಪ್ರದೇಶಗಳಲ್ಲಿ ಹಾಗೂ ರಸ್ತೆಗಳಲ್ಲಿ

ರಾತ್ರಿಯಿಡೀ ಕೆಲಸ ಮಾಡಿದ ಸ್ವಚ್ಛತಾ ಸಿಬ್ಬಂದಿ ಕೊನೆಗೂ ಪವಿತ್ರ ತಾಣವನ್ನು ಸ್ವಚ್ಛಗೊಳಿಸಿದೆ

. ಒಟ್ಟಾರೆಯಾಗಿ ಸುಮಾರು 7,000 ಟನ್ ಗೂ ಅಧಿಕ ಕಸವನ್ನು ವಿಲೇವಾರಿ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಪುರಸಭೆ ಹಂಚಿಕೊಂಡಿದೆ.

ಏನಿದು ಕನ್ವರ್​ ಯಾತ್ರೆ?

ಶ್ರಾವಣ ಮಾಸದಲ್ಲಿ ಶಿವ ಭಕ್ತರು ಕನ್ವರ್​ ಯಾತ್ರೆಯನ್ನು ದೂರದ ಊರುಗಳಿಂದ ಕೈಗೊಳ್ಳುತ್ತಾರೆ. ಹರಿದ್ವಾರ, ಗೌಮುಖ ಹಾಗೂ ಸುಲ್ತಗಂಗಂಜ್​ ಮುಂತಾದ ದೇವಸ್ಥಾನಕ್ಕೆ ಐದು ಕೋಟಿಗೂ ಅಧಿಕ ಭಕ್ತರು ಭೇಟಿಕೊಟ್ಟು ಗಂಗಾ ನದಿಯಿಂದ ಪವಿತ್ರ ಜಲವನ್ನು ಸಂಗ್ರಹಿಸಿ, ತಮ್ಮ ಊರುಗಳಿಗೆ ಕೊಂಡೊಯ್ಯುತ್ತಾರೆ.

ಗಂಗೋತ್ರಿಯಲ್ಲೂ ಇದೇ ಗತಿ

ಕೇವಲ ಹರಿದ್ವಾರ ಮಾತ್ರವಲ್ಲದೆ, ಗಂಗೋತ್ರಿಯಂತಹ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲೂ ಕಸದ ಸಮಸ್ಯೆ ಎದುರಾಗಿದೆ. ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿಸಲ್ಪಟ್ಟಿರುವ ಗಂಗೋತ್ರಿಯಲ್ಲಿ, ಯಾತ್ರಾರ್ಥಿಗಳು ಬಿಸಾಡಿದ ಬಟ್ಟೆಗಳು ಮತ್ತು ಪ್ಲಾಸ್ಟಿಕ್ ವಸ್ತುಗಳುಪತ್ತೆಯಾಗಿದೆ. ಅರಣ್ಯ ಇಲಾಖೆಯು ವಿಶೇಷ ಸ್ವಚ್ಛತಾ ಅಭಿಯಾನವನ್ನು ನಡೆಸಿ, 57 ಚೀಲಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಿದೆ.

ನೆಟ್ಟಿಗರು ಏನಂದ್ರು?

ಭಕ್ತಿ ಎಂದರೆ ಏನು? 'ಹರ್ ಕಿ ಪೌರಿ'ಯ ಘಾಟ್‌ಗಳಲ್ಲಿ ಭಕ್ತರು ಬಾಟಲಿಗಳಲ್ಲಿ ಮೂತ್ರವನ್ನು ಇಟ್ಟು ಭಕ್ತರು ಅಲ್ಲಿಂದ ಪಲಾಯನ ಮಾಡಿದ್ದಾರೆ. ಭಕ್ತಿಯ ಹೆಸರಿನಲ್ಲಿ ಇಂತಹ ಪದ್ಧತಿಯನ್ನು ಅನುಸರಿಸುವುದು ನಿಜವಾಗಿಯೂ ಅಸಹ್ಯ ನಂಬಿಕೆಯು ಶಿಸ್ತು, ಘನತೆ ಮತ್ತು ಗೌರವವನ್ನು ಪ್ರೇರೇಪಿಸಬೇಕು ಮತ್ತು ಮೂಲಭೂತ ನಾಗರಿಕ ಜವಾಬ್ದಾರಿಯನ್ನು ನಿರ್ಲಕ್ಷಿಸಲು ಒಂದು ನೆಪವಾಗಬಾರದು ಎಂದು ಪಾಲಕ್​ ಎನ್ನುವವರು ಪೋಸ್ಟ್​ ಹಂಚಿಕೊಂಡಿದ್ದಾರೆ.
ಪವಿತ್ರ ಸ್ಥಳದಲ್ಲಿ ಮೂತ್ರ ತುಂಬಿದ ಬಾಟಲಿ ಬಿಟ್ಟು ಹೋಗಿದ್ದಾರೆ. ಇಂತಹ ಕೆಲಸ ಯಾರಾದರೂ ಮಾಡಲು ಸಾಧ್ಯವೇ. ಈ ಅವ್ಯವಸ್ಥೆಗೆ ಮುಕ್ತಿಯೇ ಇಲ್ಲವೇ ಎಂದು ಹಿಮಾಲಯನ್​ ಎಂಬ ಹೆಸರಿನ ಎಕ್ಸ್​ ಬಳಕೆದಾರರೊಬ್ಬರು ಪೋಸ್ಟ್​ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net