ಇದುವರೆಗೂ ಗ್ರಾಮೀಣ ಪಂಜಾಬ್ನಲ್ಲಿ ಶಿರೋಮಣಿ ಅಕಾಲಿ ದಳದ (SAD) ಬಲವಾದ ನೆಟ್ವರ್ಕ್ನ್ನೇ ನೆಚ್ಚಿಕೊಂಡಿದ್ದ ಬಿಜೆಪಿ, ಇದೀಗ ಹಳ್ಳಿಗಳಲ್ಲೂ ತನ್ನದೇ ಆದ ರಾಜಕೀಯ ನೆಲೆ ಗಟ್ಟಿಗೊಳಿಸಲು ಪ್ಲ್ಯಾನ್ ಮಾಡಿದೆ. ಮೂಲಗಳ ಪ್ರಕಾರ, ಗ್ರಾಮೀಣ ಭಾಗದಲ್ಲಿ ಅಕಾಲಿ ದಳದ ಪ್ರಚಾರವನ್ನು ಕೊಂಚ ಸೀಮಿತಗೊಳಿಸುವಂತೆ ಬಿಜೆಪಿ ಸೂಚಿಸಿದೆ ಎನ್ನಲಾಗಿದ್ದು, ಹಳ್ಳಿಹಳ್ಳಿಗೂ ತನ್ನ ಸಂಘಟನೆ ವಿಸ್ತರಿಸಿ, ನೇರವಾಗಿ ಮತದಾರರನ್ನು ತಲುಪುವ ಲೆಕ್ಕಾಚಾರದಲ್ಲಿದೆ.