ಶಾಸಕ ಶ್ಯಾಮ್ ಬಿಹಾರಿ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದು, ಬರೇಲಿ ಜಿಲ್ಲೆಯ ಫರೀದ್ಪುರ ವಿಧಾನಸಭಾ ಕ್ಷೇತ್ರದ ಗೌರವಾನ್ವಿತ ಶಾಸಕ ಡಾ. ಶ್ಯಾಮ್ ಬಿಹಾರಿ ಲಾಲ್ ಜಿ ಅವರ ಹಠಾತ್ ನಿಧನವು ಅತ್ಯಂತ ದುಃಖಕರವಾಗಿದೆ. ನನ್ನ ವಿನಮ್ರ ಶ್ರದ್ಧಾಂಜಲಿ. ದುಃಖಿತ ಕುಟುಂಬದೊಂದಿಗೆ ನನ್ನ ಸಂತಾಪಗಳು. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ(ಏಜೆನ್ಸೀಸ್).