ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 2026ರ ಏಪ್ರಿಲ್ನಲ್ಲಿ ಸಂಸತ್ತಿನ ಕೊನೆಯ ಅಧಿವೇಶನದಲ್ಲಿ ವಿಫಲವಾದ 131 ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮರಳಿ ತರಲು ಬಿಜೆಪಿ ಯೋಜಿಸುತ್ತಿದೆ. ವಿಫಲವಾದ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ. 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಉದ್ದೇಶವನ್ನು ಹೊಂದಿದ್ದರೂ, ಅದರ ನಿಜವಾದ ಉದ್ದೇಶವು ಡಿಲಿಮಿಟೇಷನ್ ಪ್ರಕ್ರಿಯೆ ನಡೆಸುವುದಾಗಿತ್ತು.